ಪೆರುವಾಜೆ: ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ 3 ರಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಗ್ರಾಮ ಪಂಚಾಯತ್ನಲ್ಲಿ ಈ ಸಮಸ್ಯೆ ಪರಿಹಾರ ಮಾಡಲು ಅನುದಾನದ ಕೊರತೆ ಇದೆ. ಇದರ ಬಗ್ಗೆ ಕೆಲವು
ತಿಂಗಳ ಹಿಂದಿನಿಂದಲೇ ಸಮಸ್ಯೆ ಯನ್ನು ಅಧಿಕಾರಿಗಳ ಗಮನಕ್ಕೆ ತಂದ್ರು ಸಮಸ್ಯೆ – ಸಮಸ್ಯೆ ಯಾಗಿಯೇ ಉಳಿದಿದೆ. ಸರ್ಕಾರ ಇಲ್ಲಿಯವರೆಗೂ ಕುಡಿಯುವ ನೀರಿನ ವ್ಯವಸ್ಥೆ ಗೆ ಅನುದಾನ ನೀಡಿಲ್ಲ.ಕುಡಿಯುವ ನೀರಿನ ವ್ಯವಸ್ಥೆ ಎಪ್ರಿಲ್ 25 ಸಂಜೆ ಒಳಗೆ ಆಗದೆ ಇದ್ದಲ್ಲಿ ಎಪ್ರಿಲ್ 26 ರಂದು ಸುಳ್ಯ ತಾಲೂಕು ಪಂಚಾಯತ್ ಎದುರು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಾರ್ಡ್ 3 ರ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ