ಕುಂಬಳಚೇರಿ:ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.3ರಿಂದ ಆರಂಭಗೊಂಡ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ವಿಜ್ರಂಭಣೆಯಿಂದ ನಡೆಯುತಿದೆ. ಶನಿವಾರ ರಾತ್ರಿ ದೈವಗಳ ವೆಳ್ಳಾಟ್ಟಂ ನಡೆದು ಭಕ್ತರಿಗೆ
ಅನುಗ್ರಹ ನೀಡಿತು. ಮಾ.4ರಂದು ಶನಿವಾರ ಬೆಳಗ್ಗೆಯಿಂದ ಕೊರತಿಯಮ್ಮ ದೈವ, ಚಾಮುಂಡಿ ದೈವ, ಬಳಿಕ ವಿಷ್ಣುಮೂರ್ತಿ ದೈವ, ಮಧ್ಯಾಹ್ನ ಗುಳಿಗ ದೈವದ ಕೋಲ ನಡೆಯಿತು. ರಾತ್ರಿ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ ಅಂಗಣ ಪ್ರವೇಶಿಸಿ ನೆರೆದ ಸಾವಿರಾರು ಭಕ್ತರಿಗೆ ದರ್ಶನ ನೀಡಿ ಹರಸಿತು. ರಾತ್ರಿ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಿತು.
ಮಾ.5ರಂದು ಬೆಳಗ್ಗಿನಿಂದ ಕಾರ್ನೊನ್ ದೈವ, ಕೊರಚ್ಛನ್ ದೈವ,ಕಂಡನಾರ್ ಕೇಳನ್ ದೈವಗಳು ನಡೆದ ಅಪರಾಹ್ನ 2 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. ಅಪರಾಹ್ನ 3 ರಿಂದ ವಿಷ್ಣುಮೂರ್ತಿ ದೈವ ಅಂಗಣ ಪ್ರವೇಶ ಮಾಡಲಿದೆ.