ಸಂಪಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ ಗ್ರಾಮದ ಚೌಕಿ ಸಮೀಪ ಹೆದ್ದಾರಿಗೆ ಉರುಳಿದ ಬಾರಿ ಗಾತ್ರದ ಮರ ಹಾಗೂ ಬಿದಿರುಗಳನ್ನು ತೆರವು ಮಾಡಲಾಯುತು. ಮರ ಬಿದ್ದ ಕಾರಣ ಕೆಲ ಹೊತ್ತು ಸಂಚಾರಕ್ಕೆ ತಡೆ ಉಂಟಾಗಿತ್ತು.ಜೆಸಿಬಿ ಹಾಗೂ
ಮರ ಕಟ್ ಮಾಡುವ ಮೆಷಿನ್ ಮೂಲಕ ತೆರವು ಮಾಡಿ ವಾಹನ ಸಂಚಾರಕ್ಕೆ ತೆರವು ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಉಪಾಧ್ಯಕ್ಷಎಸ್. ಕೆ. ಹನೀಫ್ ಅರಣ್ಯ ಇಲಾಖೆಯ ಚಂದ್ರು, ಪೊಲೀಸ್ ಇಲಾಖೆಯ ರಾಜು, ರಾಮರಾಜ್ ಕೊಡಗು ಪೊಲೀಸ್ ಇಲಾಖೆಯ ಶಿವರಾಜ್ ಹಾಗೂ ಮರ ಕಡಿಯಲು ಜೋಸೆಫ್ ಸಂಪಾಜೆ, ಉಮ್ಮರ್ ಚಟ್ಟೆಕಲ್ಲು, ಸಮೀರ್ ತಾಜ್, ಶೇಖರ ಮರ್ಪಡ್ಕ ಓಂ ಪ್ರಕಾಶ್ ಮೊದಲದವರು ಸಹಕರಿಸಿದರು. ಇ.ವಿ ಪ್ರಶಾಂತ್ ಹಾಗೂ ಮುಗ್ರೊಡಿ ಕನ್ ಸ್ಟ್ರಕ್ಷನ್ ಅವರು ಜೆಸಿಬಿಗಳನ್ನು ನೀಡಿ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದರು.