ಪುತ್ತೂರು: ಅಶೋಕ್ ರೈ ಯವರು ಶಾಸಕರಾಗಿ ಮೇ. 13 ಕ್ಕೆ ಒಂದು ವರ್ಷ ಪೂರ್ಣವಾಗಿದ್ದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಶಾಸಕರ ಖಾಸಗಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಕಾರ್ಯಕರ್ತರು ಹಾರ ಹಾಕಿ, ಫಲಪುಷ್ಪಗಳನ್ನು ನೀಡಿ ಶಾಸಕರನ್ನು ಗೌರವಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಶಾಸಕರು ಶಾಸಕನಾಗೊ ಒಂದು ವರ್ಷದ ಅವಧಿಯಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದ್ದೇನೋ ಅದು ನಾನು ಒಬ್ಬ ಮಾಡಿದ್ದಲ್ಲ ನಿಮ್ಮೆಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಆಗಬೇಕಿದ್ದು ಇದು ಸಾಕಾರಗೊಳ್ಳುವಲ್ಲಿ ಎಲ್ಲರ ನೆರವು ಅತೀ ಅಗತ್ಯ ಎಂದು ಶಾಸಕರು ಹೇಳಿದರು.
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ,ಹಿರಿಯ ಕಾಂಗ್ರೆಸ್ ಮುಖಂಡರಾದ ನಿರ್ಮಲ್ಕುಮಾರ್ ಜೈನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಅರುಣಾ ಡಿ ರೈ, ವತ್ಸಲಾ ಪಿ ಶೆಟ್ಟಿ, ನಿವೃತ್ತ ಶಿಕ್ಷಕಿ ವೇದಾವತಿ, ಗ್ರಾಪಂ ಸದಸ್ಯರುಗಳಾದ ನವೀನಾ, ಜಯಂತಿ, ದಿವ್ಯನಾಥ ಶೆಟ್ಟಿ, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಇಸಾಕ್ ಸಾಲ್ಮರ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ,ನಯನಾ ರೈ ನೆಲ್ಲಿಕಟ್ಟೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಗಣೇಶ್ ಕೋರಂಗ, ಭಾಸ್ಕರ ರೈ ಬನ್ನೂರು, ಕೃಷ್ಣ ನಾಯ್ಕ ತೆಂಕಿಲ, ಇಬ್ರಾಹಿಂ ಸಂಪ್ಯ, ಶಾಪಿ ಪಾಪೆತ್ತಡ್ಕ, ರವೀಂದ್ರ ಅರಿಯಡ್ಕ, ರವೂಫ್ ಸಾಲ್ಮರ, ಗಂಗಾಧರ್ ಶೆಟ್ಟಿ ಎಲಿಕ, ಹಾಫಿಲ್ ಕೂರ್ನಡ್ಕ, ಕೆ ಸಿ ಅಶೋಕ್ ಶೆಟ್ಟಿ, ಶಿವಕುಮಾರ್ ಶೆಟ್ಟಿ ಶಾಂತಿಗೋಡು, ಜಯಪ್ರಕಾಶ್ ರೈ ನೂಜಿಬೈಲು,ಅಬೂಬಕ್ಕರ್ ಮುಲಾರ್, ರವಿಚಂದ್ರ ಆಚಾರ್ಯ, ಉದ್ಯಮಿ ರಿತೇಶ್ ಶೆಟ್ಟಿ,ಗಂಗಾಧರ ಪಟ್ಟುಮೂಲೆ, ಸಲಾಂ ಸಂಪ್ಯ, ಸುಪ್ರಿತ್ ಕಣ್ಣಾರಾಯ, ಯೋಗೀಶ್ ಸಾಮಾನಿ, ಕೃಚಷ್ಣಪ್ರಸಾದ್ ಭಟ್ ಬೊಳ್ಳಾಯಿ, ಮುಂಡಾಲಗುತ್ತು ಶಶಿರಾಜ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ದಿನೇಶ್ ಪಾಣಾಜೆ ಮತ್ತಿತರರು ಉಪಸ್ತಿತರಿದ್ದರು.