ಸುಳ್ಯ: ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ಭಸ್ಮಡ್ಕ, ಕುರುಂಜಿ, ಕೇರ್ಪಳ ಊರವರ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮ ಅ.2 ರಂದು ಭಸ್ಮಡ್ಕದಲ್ಲಿ ನಡೆಯಿತು.ಯುವಕ ಮಂಡಲದ ಸ್ಥಾಪಕಾಧ್ಯಕ್ಷ
ಕೆ.ಸಿ.ಶಿವಾನಂದ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಪ್ರಧಾನ ಕೆ.ಸಿ.ಸದಾನಂದ, ನ.ಪಂ. ಸದಸ್ಯ ಸುಧಾಕರ ಕುರುಂಜಿಭಾಗ್, ಯುವಕ ಮಂಡಲದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಊರವರು, ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಸೇರಿ ಸುಮಾರು 50 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಬೆಳಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಅಭಿಯಾನ ನಡೆಯಿತು.
ಪ್ರತೀ 15 ದಿನಕ್ಕೊಮ್ಮೆ ಸ್ವಚ್ಚತಾ ಕಾರ್ಯಕ್ರಮ ವಾರ್ಡ್ ವ್ಯಾಪ್ತಿಯಲ್ಲಿ ನಡೆಸುವ ಕುರಿತು ಸಂಕಲ್ಪ ಕೈಗೊಳ್ಳಲಾಯಿತು.
ಲಕ್ಷ್ಮೀಶ್ ದೇವರಕಳಿಯ ಸ್ವಾಗತಿಸಿ, ಜಿತೇಶ್ ಭಸ್ಮಡ್ಕ ವಂದಿಸಿದರು. ವಿನ್ಯಾಸ್ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.