ಸುಳ್ಯ: ಮೇ.10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 231ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ 119 ಮತ್ತು ಕಡಬ ತಾಲೂಕಿನಲ್ಲಿ 112 ಮತಗಟ್ಟೆಗಳಿವೆ. ಒಟ್ಟು 2,06,029 ಮತದಾರರಿದ್ದಾರೆ. 101856 ಪುರುಷ ಹಾಗೂ
104173 ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
44 ಕ್ರಿಟಿಕಲ್ ಬೂತ್ಗಳು:
ಸೂಕ್ಷ್ಮ ಅತಿ ಸೂಕ್ಷ್ಮ ಸೇರಿ ಒಟ್ಟು 44 ಕ್ರಿಟಿಕಲ್ ಬೂತ್ಗಳೆಂದು ಗುರುತಿಸಲಾಗಿದೆ. ಕಂದಾಯ ಇಲಾಖೆ 6 ಕ್ರಿಟಿಕಲ್ ಬೂತ್ ಎಂದು ಗುರುತಿಸಿದರೆ ಪೊಲೀಸ್ ಇಲಾಖೆ ಹೆಚ್ಚುವರಿ 38 ಬೂತ್ಗಳನ್ನು ಕ್ರಿಟಿಕಲ್ ಎಂದು ಗುರುತಿಸಿದೆ. ಈ ಬೂತ್ಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಇಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಸಿಆರ್ಪಿಎಫ್, ಕೆಎಸ್ಆರ್ಪಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೆ
153 ಬೂತ್ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.