ಸುಳ್ಯ: ಈ ಬಾರಿಯ ಚುನಾವಣೆಯಲ್ಲಿ ವಿವಿಧ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 100 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರದ 100 ಮತಗಟ್ಟೆಗಳನ್ನು ಆಯ್ಕೆ ಮಾಡಿ ಅಲ್ಲಿ ತಳಿರು ತೋರಣ ಕಟ್ಟಿ, ಬಣ್ಣ ಬಳಿದು ಪ್ರತ್ಯೇಕ ಅಲಂಕಾರಗಳನ್ನು ಮಾಡಲಾಗಿದೆ. ಮತದಾರರನ್ನು ಸೆಳೆಯಲು

ಮತಗಟ್ಟೆಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ಮಾದರಿ ಮತಗಳಲ್ಲಿ ಜಿಲ್ಲೆಯಲ್ಲಿ ಮಹಿಳಾ ಮತಗಟ್ಟೆ ಸಖಿ ಮತಗಟ್ಟೆಗಳೆಂದು 40 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇಲ್ಲಿ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ 8 ಬ್ಲೂವೇವ್(ನೀಲ ತರಂಗ) ಮತಗಟ್ಟೆಗಳು, 8 ಗೋ ಗ್ರೀನ್ ಮತಗಟ್ಟೆಗಳು, 8 ಸಾಂಪ್ರದಾಯಿಕ ಮತಗಟ್ಟೆಗಳು, 11 ಕಂಬಳ ಮತಗಟ್ಟೆಗಳು, 11 ಯಕ್ಷಗಾನ ಮತಗಟ್ಟೆಗಳು, 8 ಯುವ ಮತಗಟ್ಟೆಗಳು, 3 ಪಾರಂಪರಿಕ ಮತಗಟ್ಟೆ, 3 ಪಿಡ್ಲ್ಯುಡಿ ಮತಗಟ್ಟೆ ಎಂದು ಗುರುತಿಸಲಾಗಿದೆ.

ಸುಳ್ಯದಲ್ಲಿ12, ಬೆಳ್ತಂಗಡಿ 13, ಮೂಡಬಿದ್ರೆ 12, ಮಂಗಳೂರು ಸಿಟಿ ಉತ್ತರ 13, ಮಂಗಳೂರು ಸಿಟಿ ದಕ್ಷಿಣ 13, ಮಂಗಳೂರು 12, ಬಂಟ್ವಾಳ 13, ಪುತ್ತೂರು 12 ಮಾದರಿ ಮತಗಟ್ಟೆ ಎಂದು ಗುರುತಿಸಲಾಗಿದೆ.
ಸುಳ್ಯದ ಮಾದರಿ ಮತಗಟ್ಟೆಗಳು ಇವು: ಸುಳ್ಯದಲ್ಲಿ 5 ಸಖಿ ಮತಗಟ್ಟೆ, 2 ಯಕ್ಷಗಾನ ಮತಗಟ್ಟೆ, ಬ್ಲೂವೇವ್,ಗೋಗ್ರೀನ್, ಹೆರಿಟೇಜ್, ಕಂಬಳ, ಯುವ ಎಂದು ತಲಾ ಒಂದೊಂದು ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸಖಿ ಮತಗಟ್ಟೆಗಳೆಂದು ಬೂತ್ ಸಂಖ್ಯೆ201 ಕಾಂತಮಂಗಲ, 207 ಇಡ್ಯಡ್ಕ, 180 ಸುಳ್ಯ ರಥಬೀದಿ ರೋಟರಿ ಶಾಲೆ, 169 ಕೊಯಿಕುಳಿ,25 ಹೊಸ ಮಜಲು.
ಯಕ್ಷಗಾನ ಬೂತ್ಗಳೆಂದು ಬೂತ್ ಸಂಖ್ಯೆ 20 ನೆಲ್ಯಾಡಿ, 223 ಗೂನಡ್ಕ ಶಾರದಾ ಸ್ಕೂಲ್ , ಕಂಬಳ ಬೂತ್ ಎಂದು ಬೂತ್ ಸಂಖ್ಯೆ 27 ನೇರ್ಲ ಶಾಲಾ ಬೂತ್, ಬ್ಲೂವೇವ್ ಬೂತ್ ಸಂಖ್ಯೆ 114 ಸುಬ್ರಹ್ಮಣ್ಯ, ಸಾಂಪ್ರದಾಯಿಕ ಬೂತ್ ಎಂದು ಬೂತ್ ಸಂಖ್ಯೆ 130 ಎಣ್ಮೂರು, ಗೋಗ್ರೀನ್ ಬೂತ್ ಎಂದು ಬೂತ್ ಸಂಖ್ಯೆ 119 ನಡುಗಲ್ಲು, ಯುವ ಬೂತ್ ಎಂದು ಬೂತ್ ಸಂಖ್ಯೆ 215 ಅರಂತೋಡು ಗುರುತಿಸಲಾಗಿದೆ.