ಸುಳ್ಯ: ಕರ್ನಾಟಕ ವಿಧಾನಸಭೆಗೆ ಮೆ.10 ರಂದು ಚುನಾವಣೆ ನಡೆಯಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಮೇ.9 ರಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತಗಟ್ಟೆಗಳತ್ತ ತೆರಳಿದ್ದಾರೆ. ಸುಳ್ಯ ವಿಧಾನಸಭಾ ಕ್ಷೆತ್ರದ ಮಸ್ಟರಿಂಗ್ ಕೇಂದ್ರವಾದ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಿಂದ ಮತಯಂತ್ರ, ವಿವಿ ಪ್ಯಾಟ್ ಮತ್ತಿತರ
ಸಲಕರಣೆಗಳೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತಗಟ್ಟೆಗಳತ್ತ ತೆರಳಿದರು. ಪ್ರತಿ ಬೂತ್ಗಳಿಗೆ ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿ 6 ಮಂದಿಯನ್ನು ಪ್ರತಿ ಮತಟ್ಟೆಗಳಿಗೆ ನಿಯೋಜನೆಗೊಂಡಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1386 ಮಂದಿ ನಿಯೋಜನೆಗೊಂಡಿದ್ದಾರೆ. ಕ್ರಿಟಿಕಲ್ ಬೂತ್ಗಳಲ್ಲಿ ಹೆಚ್ಚು ಮಂದಿ ಭದ್ತತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿಗಳು ಹಾಗೂ ಡಿಗ್ರೂಪ್ ನೌಕರ ಹಾಗು ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ. ಮಸ್ಟರಿಂಗ್ ಕೇಂದ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದ ಬಳಿಕ ಮತಗಟ್ಟೆಗಳತ್ತ ತೆರಳಿದರು.
91 ವಾಹನಗಳಲ್ಲಿ ತೆರಳಿದ ಅಧಿಕಾರಿಗಳು
ಸುಳ್ಯ ವಿಧಾನಸಭಾ ಕ್ಷೇತ್ರದ 231ಬೂತ್ಗಳಿಗೆ 91 ರೂಟ್ ಗೊತ್ತುಪಡಿಸಲಾಗಿದೆ. ವಾಹನಗಳಲ್ಲಿ ತೆರಳಿದರು. 26 ಬಸ್, 37 ಜೀಪ್, 28 ವ್ಯಾನ್ಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿದರು.