ಸುಳ್ಯ:ಸುಳ್ಯ ಪೈಚಾರ್ನ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಸ್ವಲಾತ್ ವಾರ್ಷಿಕ , ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್ನ ನೂತನ ಕಛೇರಿ ಉದ್ಘಾಟನೆ ನ.24 ಮತ್ತು 25 ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ನ.24ರಂದು ಸಂಜೆ 4.30ಕ್ಕೆ ಮೊಗರ್ಪಣೆ ಮಸೀದಿ ವಠಾರದಿಂದ
ಪೈಚಾರ್ ತನಕ ಆಕರ್ಷಕ ಮೆರವಣಿಗೆ ನಡೆಯಲಿದೆ.ಮೆರವಣಿಗೆಯಲ್ಲಿ ಸ್ಥಳೀಯ 8 ತಂಡಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಸಂಜೆ 5ಕ್ಕೆ ಅಲ್ ಅಮೀನ್ ಯೂತ್ ಸೆಂಟರ್ನ ನೂತನ ಕಚೇರಿಯ ಉದ್ಘಾಟನೆ ನಡೆಯಲಿದೆ. ಸಂಜೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಜೇಶ್ವರಂ ಶಾಸಕರಾದ ಎ.ಕೆ.ಎಂ ಅಶ್ರಫ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಸೇರಿದಂತೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ. ರಾತ್ರಿ 9 ರಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ರಾಜ್ಯದ ಪ್ರಮುಖ12 ದಫ್ ತಂಡಗಳು ಭಾಗವಹಿಸಲಿದೆ.
ನ.25ರಂದು ಸಂಜೆ 7ರಿಂದ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ಕೋಲಪ್ಪುರಂ ಕೇರಳ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ. ಬಿಜೆಎಂ ಖತೀಬರಾದ ಶಮೀರ್ ಅಹ್ಮದ್ ನಈಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಅಲ್ ಅಮೀನ್ ಯೂತ್ ಸೆಂಟರ್ನ ಪದಾಧಿಕಾರಿಗಳು ತಿಳಿಸಿದ್ದಾರೆ.