ಸುಳ್ಯ:ಕಲೆಯ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಆಧುನಿಕ ಸಮಸ್ಯೆಗಳನ್ನು ಮನಮುಟ್ಟುವಂತೆ ತಲುಪಿಸಲು ಸಾಧ್ಯ. ಇಂದು ತೀರಾ ಉಲ್ಬಣಗೊಂಡಿರುವ ನೆಲ ಜಲಗಳು ಕಲುಷಿತಗೊಳ್ಳುವ ಸಮಸ್ಯೆಯನ್ನು ಬಿಂಬಿಸುವ ಚಂದ್ರಮಂಡಲ ಚರಿತ್ರೆ ಪ್ರಸಂಗವನ್ನು

ಸುಳ್ಯದ ಸ್ನೇಹ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ತುಮಕೂರಿನ ಯಕ್ಷದೀವಿಗೆ ತಂಡದವರು ಪ್ರಸ್ತುತ ಪಡಿಸಿದ ಈ ಪ್ರಸಂಗವನ್ನು ರಾಮಕುಂಜದ ಪ್ರಾಧ್ಯಾಪಕ ಗಣರಾಜ ಕುಂಬಳೆಯವರು ರಚಿಸಿದ್ದಾರೆ. ಈ ಪ್ರದರ್ಶನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ ಭಾರದ್ವಾಜ್ ಮತ್ತು ಸಿ. ಎ. ಗಣೇಶ ಭಟ್ ಅವರು
ದೀಪಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿದರು.