ಸುಳ್ಯ:ಸುಳ್ಯ ನಗರದಲ್ಲಿ ಬೆಳ್ಳಂಬೆಳಗ್ಗೆ ಕಂಟೈನರ್ ಒಂದು ಅಪಘಾತಕ್ಕೀಡಾಗಿದ್ದು ನಂದಿನಿ ಹಾಲಿನ ಸ್ಟಾಲ್ಗೆ ಗುದ್ದಿದ ಕಂಟೈನರ್ ಮಗುಚಿದ ಘಟನೆ ನಡೆದಿದೆ. ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದುರು ಬ್ಯಾಂಕ್ ಆಫ್ ಬರೋಡಾದ ಪಕ್ಕದಲ್ಲಿರುವ ನಂದಿನಿ ಸ್ಟಾಲ್ಗೆ

ಇಂದು ಮುಂಜಾನೆ 5.30ರ ವೇಳೆಗೆ
ಕಂಟೇನರ್ ಡಿಕ್ಕಿ ಹೊಡೆದಿದ್ದು ಕಟ್ಟಡದ ಒಂದು ಭಾಗ ಹಾನಿಗೊಂಡಿದೆ.ಮಂಡ್ಯದಿಂದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ನಿಯಂತ್ರಣ ತಪ್ಪಿ ತಡೆಬೇಲಿ, ಕಂಪೌಂಡ್ಗೆ ಅಪ್ಪಳಿಸಿ ನಂದಿನಿ ಸ್ಟಾಲ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ತಡೆಬೇಲಿ, ಕಂಪೌಂಡ್, ಸ್ಟಾಲ್ಗೆ ಹಾನಿ ಸಂಭವಿಸಿದೆ.
