ಸಂಪಾಜೆ: ಸಂಪಾಜೆ ವಲಯ ಕಾಂಗ್ರೆಸ್ ಸಭೆ ವಲಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆಯಲ್ಲಿ ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಭವನದಲ್ಲಿ ಜರುಗಿತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರಿಗೆ ಅತೀ ಹೆಚ್ಚು ಮುನ್ನಡೆಯನ್ನು ಕೊಟ್ಟ ಸಂಪಾಜೆಯ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ
ಸಂಪಾಜೆ ಗ್ರಾಮದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸಿ.ಎಂ.ಅಬ್ದುಲ್ಲ ಗೂನಡ್ಕರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಕೆ.ಪಿ.ಸಿ.ಸಿ.ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪಿ.ಕೆ.ಅಬೂಸಾಲಿ ಸಿ.ಎಂ.ಅಬ್ದುಲ್ಲರಿಗೆ ನುಡಿನಮನ ಸಲ್ಲಿಸಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಈ ಬಾರಿಯ ಚುನಾವಣೆಯಲ್ಲಿ ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಡೆದ ಮತಗಳ ಬಗ್ಗೆ ಅಂಕಿಅಂಶ ಸಮೇತ ವಿವರಿಸಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಮಾತನಾಡಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳು ಸಂಪಾಜೆಯಲ್ಲಿ ಕಾಂಗ್ರೆಸ್ಗೆ ಬಂದಿದೆ, ಇದಕ್ಕೆ ಶ್ರಮಿಸಿದ ಸಂಪಾಜೆಯ ಎಲ್ಲಾ ಕಾಂಗ್ರೆಸ್ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಎ.ಎ.ಮಹಮ್ಮದ್ ಕುಂಞಿ ಸಂಪಾಜೆ, ಎಸ್.ಕೆ.ಅಬ್ದುಲ್ ರಜಾಕ್ ಸಂಪಾಜೆ ಅವರು ಕಾಂಗ್ರೆಸ್ ಪಕ್ಷಕ್ಕೆ ಈ ವೇಳೆ ಸೇರ್ಪಡೆಗೊಂಡರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಆರ್.ಜಗದೀಶ್ ರೈ ಹಾಗೂ ಬಿ.ಎಸ್.ಯಮುನಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್ ಸ್ವಾಗತಿಸಿ,ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕ ವಂದಿಸಿದರು.
ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ವಿಮಲಾ ಪ್ರಸಾದ್, ಸುಶೀಲಾ ನಾಯ್ಕ್, ಸಂಪಾಜೆ ಸಹಕಾರಿ ಸಂಘದ ನಿರ್ದೇಶಕರಾದ ಎಚ್.ಎ.ಹಮೀದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ನೆಲ್ಲಿಕುಮೇರಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎ.ಕೆ.ಇಬ್ರಾಹಿಂ, ಅಲ್ಪ ಸಂಖ್ಯಾತರ ಘಟಕದ ಅರಂತೋಡು ಕ್ಷೇತ್ರದ ಅಧ್ಯಕ್ಷ ರಹೀಂ ಬೀಜದಕಟ್ಟೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕೋಶಾಧಿಕಾರಿ ತಾಜ್ ಮಹಮ್ಮದ್, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರವಿಚಂದ್ರ ಗೂನಡ್ಕ, ಪ್ರಧಾನ ಕಾರ್ಯದರ್ಶಿ ರುಡಾಲ್ಫ್ ಕ್ರಾಸ್ತಾ, ಪ್ರಮುಖರಾದ ಜಿ.ಜಿ.ನವೀನ್ ಕುಮಾರ್, ಸಿಲ್ವಸ್ಟರ್ ಡಿ’ಸೋಜಾ, ಜಿ.ಜಿ.ಚಂದ್ರವಿಲಾಸ್, ವಸಂತ ಗೌಡ ಪೆಲ್ತಡ್ಕ, ಸೆಬಾಸ್ಟಿಯನ್, ಶಿವಲಿಂಗ ಎರಿಕಡ್ಪು, ನಾಗಮುತ್ತು, ಪಳನಿವೇಲು, ಇಬ್ರಾಹಿಂ ದರ್ಖಾಸ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.