ಸಂಪಾಜೆ: ಕಾರು ಮತ್ತೆ ಪಿಕಪ್ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಸಂಪಾಜೆಯಲ್ಲಿ ನಡೆದಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ಸಂಪಾಜೆಯ ಅರೆಕಲ್ಲು ಬಳಿಯಿಂದ ರಬ್ಬರ್ ಹಾಲು ತೆಗೆದುಕೊಂಡು ಬರುತ್ತಿದ್ದ ಪಿಕಪ್ ಮಧ್ಯೆ ಸಂಪಾಜೆ ಅರೆಕಲ್ಲು ರೋಡಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ.