ಸುಳ್ಯ:ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆಯ ವತಿಯಿಂದ ಆರಂಭಿಸಿದ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಶನ್ ಇದರ ಅಧೀನದಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಡುವ ಎಸ್ಎನ್ಇಸಿ ‘ಶಿ ಸ್ಟ್ರೀಮ್’ ಮಹಿಳಾ ಕಾಲೇಜು ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮೇ 16 ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯ ತಾಲೂಕಿನ ಅಜ್ಜಾವರದ
ಬಯಂಬು ಎಜುಗಾರ್ಡನ್ನಲ್ಲಿ ನಡೆಯಲಿದೆ. ಸಮಸ್ತ ಕೇರಳ ಜಮ್ಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಶನ್ ಇದರ ಸಂಘಟನಾ ಕಾರ್ಯದರ್ಶಿ ಸಿದ್ದಿಕ್ ಅಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ ತೋಡಾರ್, ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್, ಹಕೀಂ ತಂಙಳ್ ಆದೂರು, ಉಸ್ತಾದ್ ಎಸ್. ಬಿ. ದಾರಿಮಿ, ಉಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕೆ.ಎಲ್. ದಾರಿಮಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಉಸ್ತಾದ್ ಮುಹಮ್ಮದ್ ರಫೀಕ್ ಹುದವಿ ಕೋಲಾರಿ, ಉಸ್ತಾದ್ ಅನೀಸ್ ಕೌಸರಿ ಸೇರಿದಂತೆ ಸಮಸ್ತ ಮತ್ತು ಅದರ ಪೋಷಕ ಸಂಘಟನೆಗಳಾದ ಎಸ್ ಕೆ ಜೆ ಎಂ, ಎಸ್ಎಂಎಫ್, ಎಸ್ವೈ ಎಸ್, ಎಸ್ಕೆಎಸ್ಎಸ್ಎಫ್, ಹಾಗೂ ಇನ್ನಿತರ ಸಂಘಟನೆಗಳ ನೇತಾರರು ಪ್ರಮುಖ ಉದ್ಯಮಿಗಳು ರಾಷ್ಟ್ರೀಯ ಸಾಮೂಹಿಕ ರಂಗದ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುಮಾರು 3 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ ಆಗಲಿದೆ. ಈಗ ಇರುವ ಮಹಿಳಾ ಕಾಲೇಜು ಮುಂದೆ ಸಮಸ್ತದ ಅಡಿಯಲ್ಲಿ ‘ಸಮಸ್ತ ನ್ಯಾಷನಲ್ ಎಜ್ಯುಕೇಷನ್ ಕೌನ್ಸಿಲ್(ಎಸ್ಎನ್ಇಸಿ)ನ ‘ಶಿ ಸ್ಟ್ರೀಮ್’ ಸಿಲಬಸ್ ಪ್ರಕಾರ ನಡೆಯಲಿದೆ. ಎಸ್ಎಸ್ಎಲ್ಸಿ ನಂತರ ಪಿಯುಸಿ ಮತ್ತು ಪದವಿ ಸೇರಿ 5 ವರ್ಷದ ಶಿಕ್ಷಣವನ್ನು ನೀಡಲಾಗುತ್ತದೆ. ಇಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕೂಡ ಲಭ್ಯವಿದೆ. ಸಮಸ್ತದ ಕರ್ನಾಟಕದ ಮೊದಲ ಶಿ ಸ್ಟ್ರೀಮ್ ಮಹಿಳಾ ಕಾಲೇಜು ಇದು ಎಂದು ಸಿದ್ದಿಕ್ ಅಡ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್, ವ್ಯವಸ್ಥಾಪಕರಾದ ಮೊಯಿದೀನ್ ಅನ್ಸಾರಿ, ಕೋಶಾಧಿಕಾರಿ ಮಹಮ್ಮದ್ ಕುಂಞಿ, ಎಸ್ಕೆಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಬೋವಿಕಾನ ಉಪಸ್ಥಿತರಿದ್ದರು.