ಸುಳ್ಯ:ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಸಭಾಂಗಣ ನಿರ್ಮಾಣಕ್ಕೆ ಸಂಪಾಜೆ ಗ್ರಾಮ ಗೂನಡ್ಕದ ಸಜ್ಜನ ಪ್ರತಿಷ್ಠಾನ ವತಿಯಿಂದ ಈ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಆಗಿರುವ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಯವರು 50 ಸಾವಿರ ದೇಣಿಗೆಯನ್ನು
ಕಾಲೇಜಿನ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಏ ಕೆ ಜತ್ತಪ್ಪ ಸಂಚಾಲಕರಾದ ಕೆ. ಆರ್. ಗಂಗಾಧರ್ ನಿರ್ದೇಶಕರಾದ ಎ. ಸಿ. ವಸಂತ ಮತ್ತು ಯು. ಎಂ. ಶೇಷಗಿರಿ ಹಾಗೂ ಸಜ್ಜನ ಪ್ರತಿಷ್ಠಾನದ ಮಹಮ್ಮದ್ ಶರೀಫ್ ಜಟ್ಟಿಪಳ್ಳ ಮತ್ತು ಉನೈಸ್ ಗೂನಡ್ಕ ಉಪಸ್ಥಿತರಿದ್ದರು