ಸುಳ್ಯ: ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಕೆ. ಸುರೇಶ್ ಕುಮಾರ್ ಅವರು ಮೇ.14ರಂದು ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯದ ಓಡಬಾಯಿಯ ಶಶಿಕಲಾ ಶುಭಕರ ರಾವ್ ಅವರ ಮನೆಗೆ
ಅವರು ಸೌಹಾರ್ಧ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ ಹಾಗೂ ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ ಶಾಲು ಹೊದಿಸಿ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಶಶಿಕಲಾ ಶುಭಕರ ರಾವ್, ನವನೀತ್ ಬೆಟ್ಟಂಪಾಡಿ, ಸುಮತಿ ಜಯನಗರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.