ಮುಂಬೈ:ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ಗೆ ಮತ್ತೊಂದು ಆಘಾತಕಾರಿ ಸೋಲು ಎದುರಾಗಿಸೆ. ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ 229 ರನ್ ಭಾರೀ ಅಂತರದಲ್ಲಿ ಸೋಲಿಸಿದೆ. ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 399 ರನ್ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 170 ರನ್ಗೆ ಆಲೌಟ್ ಆಯಿತು. 67 ರನ್ ಗೆ ತಂಡದ ಐವರು ಪ್ರಮುಖ
ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದರು.. ಆರಂಭಿಕರಾದ ಜಾನಿ ಬೈರ್ ಸ್ಟೋವ್ 10, ಡೇವಿಡ್ ಮಲನ್6, ಜೋ ರೂಟ್ 2, ಬೆನ್ ಸ್ಟೋಕ್ಸ್ 5 ರನ್ ಗಳಿಸಿದರೆ, ಹ್ಯಾರಿ ಬ್ರೂಕ್, ನಾಯಕ ಜೋಸ್ ಬಟ್ಲರ್ ಕೂಡಲೇ ಮರಳಿದರು. 100 ರನ್ ಗಳಿಸುವಷ್ಟರಲ್ಲಿಯೇ 8 ವಿಕೆಟ್ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಯಿತು. ಡೇವಿಡ್ ವಿಲ್ಲಿ 12, ಅದಿಲ್ ರಶೀದ್ 10 ರನ್ ಗಳಿಸಿದರು. ಮಾರ್ಕ್ ವುಡ್ 43 ಗಳಿಸಿದರೆ ಗಸ್ ಅಟ್ಕಿನ್ಸನ್ 35 ರನ್ ಗಳಿಸಿದರು. ರೀಸ್ ಚಾಪ್ಲಿನ್ ಗಾಯದಿಂದಾಗಿ ನಿವೃತ್ತಿಯಾದ ಪರಿಣಾಮ 170 ಕ್ಕೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ 3 ವಿಕೆಟ್ ಪಡೆದರೆ ಲುಂಗಿ ಗಿಡಿ, ಮಾರ್ಕೋ ಜಾನ್ಸನ್ 2 ಹಾಗೂ ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಬಂದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸನ್ 67 ಎಸೆತಗಳಲ್ಲಿ 12 ಬೌಂಡರಿ 4 ಸಿಕ್ಸರ್ ಸಹಿತ 109 ಗಳಿಸಿದರು. ರೀಝ ಹೆಂಡ್ರಿಕ್ಸ್ 9 ಬೌಂಡರಿ 3 ಸಿಕ್ಸರ್ ಸಹಿತ 85 ರನ್ ಬಾರಿಸಿದರೆ, ರಸ್ಸಿ ವಾನ್ ಡರ್ ಡಸ್ಸನ್ 8 ಬೌಂಡರಿ ಸಹಿತ 60 ರನ್ ಬಾರಿಸಿದರು. ನಾಯಕ ಐಡೆನ್ ಮಾಕ್ರಮ್ 44 ರನ್ ಗಳಿಸಿದರೆ,ಮಾರ್ಕೋ ಜಾನ್ಸನ್ 77 ರನ್ ಬಾರಿಸಿದರು.
ಇಂಗ್ಲೆಂಡ್ ಪರ ರೀಸ್ ಟಾಪ್ಲಿ 3 ವಿಕೆಟ್ ಪಡೆದರೆ ಆದಿಲ್ ರಶೀದ್, ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಕಬಳಿಸಿದರು.