ಸುಳ್ಯ:ಚುನಾವಣಾ ಸಂದರ್ಭದಲ್ಲಿ ಕೋವಿ ಪರವಾನಿಗೆ ಹೊಂದಿದ ಎಲ್ಲಾ ರೈತರಿಗೆ ಠೇವಣಿ ಇಡುವುದನ್ನು ಸಂಪೂರ್ಣ ವಿನಾಯಿತಿ ನೀಡಬೇಕು. ಈಗಾಗಲೇ ಠೇವಣಿ ವಿನಾಯಿತಿಗೆ ಅರ್ಜಿ ಸಲ್ಲಿಸಿದವರಿಗೆ ಕೂಡ ವಿನಾಯಿತಿ ತಡೆ ಹಿಡಿದಿದ್ದನ್ನು ಮರು ಪರಿಶೀಲಿಸಿ ವಿನಾಯಿತಿ ನೀಡಬೇಕು ಎಂದು ರೈತ ಸಂಘ ಆಗ್ರಹಿಸಿದೆ. ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲು ಕೋವಿ ಪರವಾನಿಗೆ ಹೊಂದಿದ ಎಲ್ಲಾ ರೈತರಿಗೆ ಠೇವಣಿ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಪಂದಿಸಿ ಚುನಾವಣೆಯ ಸಮಯದಲ್ಲಿ ಕೋವಿ ಪರವಾನಿಗೆ ಪಡೆದ ರೈತರಿಗೆ ಠೇವಣಿ ಇಡುವುದನ್ನು ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಹೇಳಿದರು.
ಅರಂತೋಡು, ತೊಡಿಕಾನ, ಸಂಪಾಜೆ ಭಾಗದಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ನಿರಂತರವಾಗಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹಲವು ರೀತಿಯಲ್ಲಿ ಕಾಡು ಪ್ರಾಣಿಗಳಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೃಷಿ ತೋಟಗಳಿಗೆ ನಿರಂತರವಾಗಿ ಕಾಡುಪ್ರಾಣಿಗಳ ಧಾಳಿ ನಡೆಯುತ್ತಿದೆ.ಇದರಿಂದ ರೈತರು ಕಂಗಾಲಾಗಿದ್ದಾರೆ ಇದಕ್ಕೆ ಸೂಕ್ತ ಪರಿಹಾರವನ್ನು ಸರಕಾರ ಒದಗಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಅರಂಬೂರು, ತಾಲೂಕು ಉಪಾಧ್ಯಕ್ಷರಾದ ತೀರ್ಥಕುಮಾರ್ ಉಳುವಾರು, ಸುಳ್ಯಕೋಡಿ ಮಾಧವ ಗೌಡ, ಕಾರ್ಯದರ್ಶಿ ಭರತ್ ಕುಮಾರ್, ಖಜಾಂಜಿ ದೇವಪ್ಪ ಗೌಡ ಅರಂತೋಡು ಉಪಸ್ಥಿತರಿದ್ದರು.