ಸುಳ್ಯ: ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಸಾಲಿನ ಬೇಸಿಗೆ ಶಿಬಿರವನ್ನು ಶಾಲೆಯ ಸಂಚಾಲಕರಾದ ಡಾ. ಕೆ ವಿ.ರೇಣುಕಾ ಪ್ರಸಾದ್ ಇವರ ಶುಭ ಹಾರೈಕೆಗಳೊಂದಿಗೆ ಏಪ್ರಿಲ್ 10 ರಂದು ಉದ್ಘಾಟಿಸಿ ಏಪ್ರಿಲ್ 21 ರವರೆಗೆ ನಡೆಯಿತು. ಮಕ್ಕಳು ಹತ್ತು ದಿನಗಳ ಈ ಶಿಬಿರದಲ್ಲಿ ಬೇಸಿಗೆ ರಜೆಯ ಸವಿಯನ್ನು ಸವಿದರು.ರಾಜ್ಯ ಹಾಗೂ ತಾಲೂಕು ಮಟ್ಟದ ಪ್ರತಿಷ್ಠಿತ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದರು.ಗೂಡು ದೀಪ ತಯಾರಿಕೆ ನೃತ್ಯ ಫುಟ್ಬಾಲ್ ತರಬೇತಿ,ಪೇಪರ್ ಆರ್ಟ್ ಥಿಯೇಟರ್ ಆರ್ಟ್, ತೆಂಗಿನ ಗರಿ ಆರ್ಟ್ ಹೀಗೆ ಹತ್ತು ಹಲವಾರು ಕಲಿಕೆಯನ್ನು ಬೇಸಿಗೆ ಶಿಬಿರದಲ್ಲಿ
ಕಲಿಸಲಾಯಿತು. ಸಂಪನ್ಮೂಲಗಳ ವ್ಯಕಿಗಳಾಗಿ ನರೇಂದ್ರ ಬೆಂಗಳೂರು (ಫುಟ್ಬಾಲ್) ಮುಖೇಶ್ ಸುಳ್ಯ ( ಥೀಯೇಟರ್ ಗೇಮ್ಸ್ ಮತ್ತು ಮ್ಯಾಜಿಕ್), ಮಂಜು ಬೆಂಗಳೂರು ( ಥಿಯೇಟರ್ ಆರ್ಟ್) ಪದ್ಮನಾಭ ಬೆಳ್ಳಾರೆ, ಪ್ರಸನ್ನ ಐವರ್ನಾಡು, ( ಪೇಪರ್ ಕ್ರಾಫ್ಟ್ ), ಮೆಲ್ವಿನ ( ಮಣ್ಣಿನ ತಯಾರಿಕೆ )
ಕೌಶಿಕ್ (ನೃತ್ಯ ) ಯಶವಂತ ಕುಡೇಕಲ್ಲು ( ತೆಂಗಿನ ಗರಿ ಆರ್ಟ್ ) ತೀರ್ಥವರ್ಣ ಹಾಗೂ ಸುಪ್ರಿಯಾ ಈಜು ತರಬೇತುದಾರರಾಗಿ ಭಾಗವಸಿದ್ದರು.10 ದಿನಗಳ ಈ ವರ್ಣಮಯ ಬೇಸಿಗೆ ಶಿಬಿರವು ಏಪ್ರಿಲ್ 21ರಂದು ಸಮಾರೋಪಗೊಂಡಿತು. ಸಮಾರೋಪದ ಅತಿಥಿಯಾಗಿ ಶಾಲೆಯ ಸಿಇ ಓ ಡಾ.ಉಜ್ವಲ್ ಯು ಜೆ ಯವರು ಆಗಮಿಸಿ ಮಕ್ಕಳಿಗೆ ಪತ್ರವನ್ನು ವಿತರಿಸಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಯೋಜಕ ಶಿಕ್ಷಕ ಸುಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡಿತು. ನಂತರ ಸಿಇಓ ಡಾ. ಉಜ್ವಲ್ ಯು ಜೆ ಯವರು ಬೇಸಿಗೆ ಶಿಬಿರದ ಮಹತ್ವವನ್ನು ತಿಳಿಸಿ ಮತ್ತು ಹೆತ್ತವರನ್ನು ಗುರುಹಿರಿಯರನ್ನು ಗೌರವಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಶಿಸ್ತಿನಿಂದ ಬಾಳಿ ಎಂದು ತಿಳಿ ಹೇಳಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್ ಅಧ್ಯಕ್ಷ ಭಾಷಣ ಮಾಡಿ ಮಕ್ಕಳಿಗೆ ಶುಭಹಾರೈಸಿದರು.
ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಶಿಕ್ಷಕಿ ಬಬಿತ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.