ಸುಳ್ಯ: ಸುಳ್ಯದಲ್ಲಿ ಬುಧವಾರ ದಿನಪೂರ್ತಿ ಧಾರಾಕಾರ ಮಳೆ ಸುರಿದಿದೆ. ಬೆಳಿಗ್ಗಿ 10 ಗಂಟೆಯ ಬಳಿಕ ಮಳೆ ಆರಂಭವಾಗಿದ್ದು ಬಳಿಕ ಧಾರಾಕಾರ ಮಳೆಯಾಯಿತು. ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಸುರಿದಿದ್ದು ಮಳೆಗಾಲ ಆರಂಭದ ವಾತಾವರಣ ಉಂಟಾಗಿದ. ರಾಜ್ಯದಲ್ಲಿ ಮುಂಗಾರು
ಪೂರ್ವ ಮಳೆ ಮುಂದುವರಿದಿದ್ದು ಬುಧವಾರ ಗುರುವಾರವೂ ಕೆಲವು ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಗುಡುಗು ಸಹಿತ ಜೋರು ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ 30– 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಚಾಮರಾಜನಗರ, ಮೈಸೂರು, ರಾಮನಗರ ಜಿಲ್ಲೆಯ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.