ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ 3 ಯೋಜನೆಯಂತೆ ಕಾರ್ಯಾಚರಣೆ ಮುಂದುವರಿಸಿದೆ ಎಂದು ಇಸ್ರೋ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಅದರಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಗೆ ಇಳಿದ ವಿಡಿಯೋ
ತುಣುಕೊಂದನ್ನು ಇಸ್ರೋ ಹಂಚಿಕೊಂಡಿತ್ತು. ಚಂದ್ರಯಾನ-3 ಮಿಷನ್ ಯೋಜಿಸಿದಂತೆಯೇ ರೋವರ್ನ ಎಲ್ಲ ಚಲನೆಗಳು ಪರಿಶೀಲಿಸಲ್ಪಟ್ಟಿವೆ. ರೋವರ್ ಚಂದ್ರನ ಮೇಲೆ ಸುಮಾರು 8 ಮೀಟರ್ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ತಿಳಿಸಿದೆ.
ರೋವರ್ ಪೇಲೋಡ್ಸ್ಗಳಾಗಿರುವ ಎಲ್ಐಬಿಎಸ್ ಮತ್ತು ಎಪಿಎಕ್ಸ್ಎಸ್ ಆನ್ ಆಗಿವೆ. ಪ್ರೊಪಲ್ಷನ್ ಮೋಡ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ನಲ್ಲಿ ಪೇಲೋಡ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಇಸ್ರೋ ತಿಳಿಸಿದೆ.