ಸುಳ್ಯ:ಮಾ.25 ರಂದು ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬ, ಲೈನ್, ಟಿಸಿ ಸೆಂಟರ್ಗಳಿಗೆ ಹಾನಿ ಸಂಭವಿಸಿದ್ದು ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಜಾಲ ಅಸ್ತವ್ಯಸ್ತವಾಗಿದೆ. ಸುಳ್ಯ ತಾಲೂಕಿನಲ್ಲಿ

ಎರಡು ವಿದ್ಯುತ್ ಪರಿವರ್ತಕ ಕೇಂದ್ರ(ಟಿಸಿ ಸ್ಥಾವರ), 36 ಹೆಚ್ಟಿ ಕಂಬಗಳು, 30 ಎಲ್ಟಿ ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ. ನಿನ್ನೆ ಸುರಿದ ಭಾರೀ ಮಳೆ ಹಾಗೂ ಗಾಳಿ ಮಳೆಗೆ ವ್ಯಾಪಕ ಹಾನಿ ಉಂಟಾಗಿ ಅಮ್ಚಿನಡ್ಕ, ಪಂಜಿಗುಂಡಿ, ದೊಡ್ಡೇರಿ ಭಾಗಗಳಲ್ಲಿ ಮರ ಬಿದ್ದು 33 ಕೆವಿ ಲೈನ್ಗೆ ಹಾನಿ ಉಂಟಾಗಿ ವಿದ್ಯುತ್ ಕಡಿತವಾಗಿತ್ತು. ಇದರ ದುರಸ್ತಿ ಕಾರ್ಯ ತಡ ರಾತ್ರಿ ತನಕ ಮಾಡಲಾಗಿದ್ದು ಬೆಳಗಿನ ಜಾವ ವಿದ್ಯುತ್ ಸಂಪರ್ಕ ಸರಿ ಪಡಿಸಲಾಗಿದೆ. ಆದರೆ ವಿವಿಧ

ಭಾಗಗಳಲ್ಲಿ ವಿದ್ಯುತ್ ಕಂಬಗಳು, ಪರಿವರ್ತಕಗಳು, ಲೈನ್ಗಳು ಹಾನಿ ಉಂಟಾದ ಕಾರಣ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸುಳ್ಯ, ಬೆಳ್ಳಾರೆ, ಅರಂತೋಡು, ಜಾಲ್ಸೂರು ಸೇರಿ ವಿವಿಧ ಭಾಗಗಳಲ್ಲಿ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.