ಸುಳ್ಯ:ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಇದರ ಸಾರಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿ ಸರ್ಕಲ್ ಸುಳ್ಯ ಮತ್ತು ಎನ್.ಎಸ್.ಎಸ್ ಘಟಕ ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಸುಳ್ಯ ಇದರ ಸಹಕಾರದೊಂದಿಗೆ ಸೇವಾ ಸಮ್ಮಿಲನ ಅಂಗವಾಗಿ ಮುಕ್ತ ಜನಪದ ಉತ್ಸವ ಮತ್ತು ರಾಜ್ಯಮಟ್ಟದ ನಾಯಕತ್ವ ಶಿಬಿರ ಜ್ಯೋತಿ ವೃತ್ತದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ
ಅಮೃತ ಭವನದಲ್ಲಿ ಉದ್ಘಾಟನೆಗೊಂಡಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಉದ್ಘಾಟಿಸಿದರು. ಯುವ ಜನತೆಗೆ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ಮಾಡುವ ಈ ರೀತಿಯ ಶಿಬಿರಗಳು ಯುವ ಜನಾಂಗದ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿ ಎಂದು ಹೇಳಿದರು.
ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಅಣ್ಣಯ್ಯ ಕೆ. ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಹರೀಶ್, ಕಚೇರಿ ಅಧೀಕ್ಷಕರಾಗಿ ಶಿವರಾಮ ಕೇರ್ಪಳ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರವಿರಾಜ್ ಅಡ್ಕಾರ್ ಅತಿಥಿಗಳಾಗಿದ್ದರು.

ಎನ್ಎಸ್ಎಸ್ ಸೇವಾ ಸಂಗಮದ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಉಪಸ್ಥಿತರಿದ್ದರು. ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ನ ಅಧ್ಯಕ್ಷ ವಿಜೇತ್ ಶಿರ್ಲಾಲ್ ಸ್ವಾಗತಿಸಿ, ಲಕ್ಷ್ಮೀಶ ವಂದಿಸಿದರು. ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ನಾಯಕತ್ವ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಮೂರ್ತಿ,ಚಂದ್ರಶೇಖರ ಬಿಳಿನೆಲೆ,ಡಾ.ಅನುರಾಧಾ ಕುರುಂಜಿ ತರಬೇತಿ ನೀಡಿದರು. ಉಪನ್ಯಾಸಕರಾದ ವೈ.ವಿ.ಫಾಲಚಂದ್ರ, ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ನ ಅಧ್ಯಕ್ಷ ವಿಜೇತ್ ಶಿರ್ಲಾಲ್, ಕಾರ್ಯದರ್ಶಿ ವಿಶ್ವಕಿರಣ್ ಪದಾಧಿಕಾರಿಗಳಾದ

ರಕ್ಷಿತ್ ಬೊಳ್ಳೂರು, ಸುಶಾಂತ್ ಅಜ್ಜಿಕಲ್ಲು, ಜೀವನ್, ಕಿಶೋರ್, ಪ್ರಶಾಂತ್, ಯಶವಂತ್, ಲಕ್ಷ್ಮೀಶ ಪಿ.ಕೆ, ಗಗನ್ ಬೈಪಡಿತ್ತಾಯ, ಯಶ್ವಿತ್, ತೀರ್ಥೇಶ್, ಹಿತೇಶ್, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಎರಡು ದಿನದ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಮಾ.30ರಂದು ಸಂಜೆ 6ರಿಂದ ಜನಪದ ಉತ್ಸವ ನಡೆಯಲಿದೆ. ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸುವರು. ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಹಶೀಲ್ದಾರ್ ಎಂ.ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಭಾಗವಹಿಸಲಿದ್ದಾರೆ.