ಸುಳ್ಯ:ಸುಳ್ಯ ತಾಲೂಕಿನ ಪ್ರಮುಖ ರಸ್ತೆಯಾದ ಎಲಿಮಲೆ-ಅರಂತೋಡು ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1.25ಕೋಟಿ ವೆಚ್ಚದ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ
ವೆಂಕಟ್ ದಂಬೆಕೊಡಿ,ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ವಿನಯ್ ಮುಳುಗಾಡು, ದಿವಾಕರ ಮುಂಡೋಡಿ,ರಾಕೇಶ್ ಮೆಟ್ಟಿನಡ್ಕ,ಧಜನಂಜಯ ,ನವೀನ್ ಬಾಳುಗೊಡು,ಹರ್ಷಿತ್ ಕಡ್ತಲ ಕಜೆ, ಇಂಜಿನಿಯರ್ ಪರಮೇಶ್ವರ, ಗುತ್ತಿಗೆದಾರ ಸತೀಸ್ ಬಪ್ಪಳಿಕೆ, ಉಪಸ್ಥಿತರಿದ್ದರು.ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ- ರಸ್ತೆಯು 45ಲಕ್ಷದ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು ಇದರ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೆರಿಸಿದರು.ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್,ಬಾಲಕೃಷ್ಣ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಭಾಜಪ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ,ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ. ಕುಸುಮಾಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು. ಪಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ
50ಲಕ್ಷ ವೆಚ್ಚದ ಪಂಜ- ಬಳ್ಳಕ್ಕ ರಸ್ತೆಗೆ ಗುದ್ದಲಿಪೂಜೆ ಮತ್ತು 16.1 ಲಕ್ಷದ ಗ್ರಾಮಿಣ ರಸ್ತೆಯ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು,ಹಿರಿಯರಾದ ಡಾ.ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿದರು.ಈ ಸಂದರ್ಭದಲ್ಲಿ ಪಂಜ ಗ್ರಾಮಪಂಚಾಯತಿ ಅಧ್ಯಕ್ಷ ವಿಜಯಲಕ್ಷ್ಮಿ ಕಲ್ಕ,ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ ಪರಮೇಶ್ವರ್ ,ಗುತ್ತಿಗೆದಾರ ಹರೀಶ್ ಬಪ್ಪಳಿಗೆ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ
ವೆಂಕಟ್ ವಳಂಬೆ , ಹಿರಿಯರಾದ ಡಾ ರಾಮಯ್ಯ ಭಟ್ ಪಂಜ, ಮಾಜಿ ತಾ. ಪಂ ಅಧ್ಯಕ್ಷೆ ಸುವರ್ಣಿಣಿ, , ಲೋಕೇಶ್ ಬರೆಮೆಲು, ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಶಾಸ್ತಿ,ಗ್ರಾ ಪಂ ಸದಸ್ಯರಾದ ಶರತ್ ಕುಡ್ವ, ನೇತ್ರಾವತಿ ಕಲ್ಲಾಜೆ,ಚಂದ್ರಶೇಖರ ದೇರಾಜೆ, ಪ್ರಮುಖರಾದ ಲಿಗೋಧರ ಪಂಜ, ವಾಚಣ್ಣ ಕೆರೆಮೂಲೆ,ಕಾರ್ಯಪ್ಪ ಚಿದ್ಗಲ್ಲು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಪಂಜ- ಮಂಜೇಶ್ವರ ರಸ್ತೆಯ 75ಲಕ್ಷ ವೆಚ್ಚದ ಮರುಡಾಮರಿಕರಣಕ್ಕೆ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೆರಿಸಿದರು.ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಪ್ರಮುಖರಾದ
ಸುಬ್ರಹ್ಮಣ್ಯ ಕುಳ, ವೆಂಕಟ್ ದಂಬೆಕೊಡಿ, ರಮಾನಂದ ಎಣ್ಣೆಮಜಲು,ದೇವಿ ಚಿಕ್ಮುಳಿ, ರವಿನರಿಯಾಂಗ,ರಾಜು ಕನಕಲ್ ಮತ್ತಿತರರು ಉಪಸ್ಥಿತರಿದ್ದರು.
ಗುತ್ತಿಗಾರು-ಕಮಿಲ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ನೂತನ ಸೇತುವೆಗೆ 100ಲಕ್ಷ ಮತ್ತು ಪೈಕ- ಬಾಕಿಲ ರಸ್ತೆ ಅಭಿವೃದ್ಧಿಗೆ 20ಲಕ್ಷದ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೆರಿಸಿದರು.ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಸದಸ್ಯರುಗಳಾದ ಸತೀಸ್ ಮೂಕಮಲೆ,
ಮಾಯಿಲಪ್ಪ ಕೊಂಬೆಟ್ಟು,ಜಗದೀಶ ಬಾಕಿಲ,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಪ್ರಮುಖರಾದ ಬೆಳ್ಯಪ್ಪ ಗೌಡ ಕಡ್ತಲಕಜೆ,ವೆಂಕಟ್ ದಂಬೆಕೊಡಿ,ಮುಳಿಯ ಕೇಶವ ಭಟ್, ಪ್ರಮುಖರಾದ ರಾಧಾಕೃಷ್ಣ ತುಪ್ಪದ ಮನೆ,ಹರಿಶ್ಚಂದ್ರ ಕುಳ್ಳಂಪಾಡಿ, ರಾಕೇಶ್ ಮೆಟ್ಟಿನಡ್ಕ,ನವೀನ್ ಬಾಳುಗೊಡು,ತಿಲಕ ಕೊಲ್ಯ,ದೇವಿ ಪ್ರಸಾದ್ ಚಿಕ್ಮುಳಿ,ಹರ್ಷಿತ್ ಕಡ್ತಲ್ಕಜೆ,ಮತ್ತಿತರರು ಉಪಸ್ಥಿತರಿದ್ದರು.