ಪಂಜ:ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈಭಾರತ್ ಮಂಗಳೂರು, ನೆಹರು ಯುವ ಕೇಂದ್ರ, ಮಂಗಳೂರು ಮತ್ತು ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಶ್ರೀ ದೇವಿ ಸಂಜೀವಿನಿ ಸಂಘ ಚಿದ್ಗಲ್, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಧರ್ಮಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್ ಇದರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರ ಪಂಜದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು
ಕೂತ್ಕುಂಜ ಶ್ರೀ ದುರ್ಗಾ ಮಹಿಳಾ ಮಂಡಲ ಅಧ್ಯಕ್ಷೆ ದೇವಕಿ ಧರ್ಮಪಾಲ ಚಿದ್ಗಲ್ ವಹಿಸಿದ್ದರು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ ದೇವಿಪ್ರಸಾದ್ ಕಾನತ್ತೂರ್, ಕಡಬ ತಾಲೂಕು ಯುವ ಸಂಯುಕ್ತ ಮಂಡಳಿ ನಿರ್ದೇಶಕ ದೇವಿಪ್ರಸಾದ್ ರೈ ಗೆಜ್ಜೆ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು , ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಭಾಸ್ಕರ , ಕೂತ್ಕುಂಜ ಮಹಿಳಾ ಸಂಘಟನೆ ಅಧ್ಯಕ್ಷೆ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ವೇದಿಕೆಯಲ್ಲಿ

ಉಪಸ್ಥಿತರಿದ್ದರು. ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿದರು.ಶಶಿ ದಾಸ್ ನಾಗತೀರ್ಥ ವಂದಿಸಿದರು, ಹೇಮಾ ವಸಂತ್ ಚಿದ್ಗಲ್ ನಿರೂಪಿಸಿದರು.
ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಅಧ್ಯಕ್ಷ ಹಿತೇಶ್ ಪಂಜದಬೈಲು ವಹಿಸಿದ್ದರು . ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಬಹುಮಾನ ವಿತರಣೆ ಮಾಡಿದರು. ಸುಳ್ಯ ತಾಲೂಕು ಯುವ ಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪವನ್ ಪಲ್ಲತ್ತಡ್ಕ , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೂರ್ವ ನಿರ್ದೇಶಕಿ ಹೇಮಾ ವಸಂತ್ ಚಿದ್ಗಲ್ , ದುರ್ಗಾ ಮಹಿಳಾ ಮಂಡಲ ಅಧ್ಯಕ್ಷೆ ದೇವಕಿ ಧರ್ಮಪಾಲ ಚಿದ್ಗಲ್ , ದುರ್ಗಾಶ್ರೀ ಆತ್ಮ ರೈತ ಸಂಘ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಭಾಸ್ಕರ ಚಿದ್ಗಲ್ , ಮಹಿಳಾ ಸಂಘಟನೆ ಅಧ್ಯಕ್ಷೆ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.