ಪಂಜ:ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್, ಸುಳ್ಯ ತಾಲೂಕು, ಪಂಜ ಮತ್ತು ನಿಂತಿಕಲ್ಲು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 15ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.ಪಾಲ್ತಿಮಾರ್ ಶ್ರೀ ಮೂಕಾಂಬಿಕ ಕ್ಷೇತ್ರದ
ಪಂಡಿತ್ ಶ್ರೀ ಕೇಶವ ಜ್ಯೋತಿಷ್ಯರು ಭಜನಾ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಭಜನೆ ದೇವರನ್ನು ಸ್ಮರಿಸಲು ,ಒಲಿಸಲು ಅತ್ಯಂತ ಸುಲಭ ಸಾಧನ ಎಂದು ಅವರು ಹೇಳಿದರು
ಮುಖ್ಯ ಅತಿಥಿಯಾಗಿದ್ದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಭಜನೆಗಳ ಕೈಪಿಡಿ ಬಿಡುಗಡೆ ಗೊಳಿಸಿ ಮಾತನಾಡಿ ಭಗವಂತನಿಗೆ ಹತ್ತಿರವಾಗಲು ಭಜನೆ ಸುಲಭ ಮಾರ್ಗ ಎಂದು ಹೇಳಿದರು.ಶಿಬಿರದ ಪಾಲ್ಗೊಂಡ ಮಕ್ಕಳ ಮನೆಗಳಲ್ಲಿ
ಪ್ರತೀ ದಿನ ಸಂಜೆ ಭಜನೆ ಸಂಕೀರ್ತನೆ ನಡೆಯಬೇಕು. ಈ ಮೂಲಕ ಪ್ರತಿ ಮನೆ ಮನೆಗಳಲ್ಲಿ ಭಜನಾ ಸಂಕೀರ್ತನೆ ನಡೆಯಬೇಕು ಎಂದು ಅವರು ಹೇಳಿದರು.
ಶ್ರೀ ಶಾರದಾಂಬ ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಚೇರಿಯ ಯೋಜನಾಧಿಕಾರಿ ಜಯಂತಿ, ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಪಿ ಯನ್, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯ
ಮೇಲ್ವಿಚಾರಕಿ ಕಲಾವತಿ ಪಿ ಬಿ,ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಪಂಜ ವಲಯ ಮೇಲ್ವಿಚಾರಕಿ ಕಾವ್ಯಲಕ್ಷ್ಮೀ , ಪಂಜ ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ, ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ, ಪಲ್ಲೋಡಿ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಪಲ್ಲೋಡಿ,ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ವಿಶ್ವನಾಥ ಸಂಪ, ನಾಗತೀರ್ಥ ಮಿತ್ರ ಮಂಡಲ ಅಧ್ಯಕ್ಷ ಅಶೋಕ್ ಆಚಾರ್ಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಧನ್ಯ, ಭಜನೋತ್ಸವ ಸಮಿತಿ ಪೂರ್ವಾಧ್ಯಕ್ಷ ಕುಸುಮಾಧರ ಕೆಮ್ಮೂರು, ಭಜನೋತ್ಸವ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಬೇರ್ಯ, ಕಾರ್ಯದರ್ಶಿ ದಿನೇಶ್ ಪಂಜದಬೈಲು, ತರಬೇತುದಾರದ ನಳಿನಿ ವಿ ಆಚಾರ್ಯ,ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ ತೋಟ ನಿರೂಪಿಸಿದರು. ಕುಸುಮಾಧರ ಕೆಮ್ಮೂರು ಪ್ರಾಸ್ತಾವಿಕವಾಗಿ ಮಾತನಾಡಿಸರು. ಭಜನಾ ಮಂಡಳಿ ಕೋಶಾಧ್ಯಕ್ಷ ಲೋಕೇಶ್ ಬರಮೇಲು ವಂದಿಸಿದರು.
ಮೇ.10 ರಂದು ಸಂಜೆ 6 ರಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ,ಅರ್ಧ ಏಕಾಹ ಭಜನೆ ಕಾರ್ಯಕ್ರಮ ಜರುಗಲಿದೆ.
ಮೇ.11ರಂದು ಅ. 3ರಿಂದ ಸಮಾರೋಪ ಸಮಾರಂಭ ನಡೆಯಲಿದೆ.