ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 28 ರನ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಹಿಂದಿನ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಅನುಭವಿಸಿದ್ದ 7 ವಿಕೆಟ್ ಸೋಲಿಗೆ ಉತ್ತರ ಹೇಳಿದೆ. ಇದರೊಂದಿಗೆ
ಐಪಿಎಲ್ 2024ರ ಆವೃತ್ತಿಯಲ್ಲಿ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಋತುರಾಜ್ ಪಡೆಯುವ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯ್ತು.
ನಾಯಕ ಋತುರಾಜ್ 21 ಎಸೆತಗಳಲ್ಲಿ 32 ರನ್, ಡ್ಯಾರೆಲ್ ಮಿಚ್ಚೆಲ್ 30 ರನ್, ರವೀಂದ್ರ ಜಡೇಜ 26 ಎಸೆತಗಳಲ್ಲಿ 43 ಗಳಿಸಿದರು. ಪಂಜಾಬ್ ಪರ. ಪ್ರಭ್ಸಿಮ್ರಾನ್ ಸಿಂಗ್ 30 ರನ್, ಶಶಾಂಕ್ ಸಿಂಗ್ (27) ರನ್ ಬಾರಿಸಿದರು.
ಹರ್ಪ್ರೀತ್ ಬ್ರಾರ್ 17 ರನ್, ಹರ್ಷಲ್ ಪಟೇಲ್ 12 ರನ್ ಹಾಗೂ ಕಗಿಸೊ ರಬಾಡ 11 ರನ್ ಬಾರಿಸಿ ಔಟಾದರು.