ಕಲ್ಲಪಳ್ಳಿ:ಕೇರಳ ಗ್ರಾಮ ಪಂಚಾಯತ್ ಚುನಾವಣೆ ಸದ್ಯದಲ್ಲಿಯೇ ಘೋಷಣೆಯಾಗದಲಿದ್ದು ಪಂಚಾಯತ್ಗಳ ವಾರ್ಡ್ ಮೀಸಲಾತಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲಾಗುತಿದೆ. ಗಡಿ ಪ್ರದೇಶವಾದ ಪನತ್ತಡಿ ಪಂಚಾಯತ್ನ ವಾರ್ಡ್ಗಳ
ಮೀಸಲಾತಿ ಪ್ರಕಟಗೊಂಡಿದ್ದು ಏಳನೇ ವಾರ್ಡ್ ಕಲ್ಲಪಳ್ಳಿ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಸಾಮಾನ್ಯ ಮೀಸಲಾಗಿದ್ದ ಕಲ್ಲಪಳ್ಳಿ ವಾರ್ಡ್ ಈ ಬಾರಿ ಮಹಿಳ ಮೀಸಲಾಗಿದೆ.17 ವಾರ್ಡ್ಗಳಿರುವ ಪನತ್ತಡಿ ಗ್ರಾಮ ಪಂಚಾಯತ್ನಲ್ಲಿ 1,2,3,4,8,9,13 ಸಾಮಾನ್ಯ ಮೀಸಲಾತಿ, 5,6,7,10,11,12,16,17 ಮಹಿಳಾ ಮೀಸಲಾತಿ ಬಂದಿದೆ. 14 ನೇ ವಾರ್ಡ್ ಎಸ್ಟಿ ಮೀಸಲು ಹಾಗೂ 15ನೇ ವಾರ್ಡ್ ಎಸ್ಟಿ ಮಹಿಳಾ ಮೀಸಲು ಆಗಿದೆ ಎಂದು ತಿಳಿದು ಬಂದಿದೆ.















