ಸುಳ್ಯ:ನೀಟ್ ಫಲಿತಾಂಶ ಪ್ರಕಟಗೊಂಡಿದ್ದು ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮ್ ಶೇಖರ್ ಕೆ ಎಸ್ 676/720 ಅಂಕಗಳಿಸಿದ್ದಾರೆ. ವಿದ್ಯಾರ್ಥಿಗಳಾದ
ನಿಧಿ, ಮೋಕ್ಷಿತ , ಪ್ರಜ್ಞ, ಲೇಖನ ಜಿ ಜೆ, ಬೃಂದ ಸುರೇಶ್, ದೀಕ್ಷಾ, ಮಹಮ್ಮದ್ ಆಫಿಲ್ ,ಶ್ರಾವ್ಯ, ನಿಖಿಲ್ ಕೆ ಟಿ, ಸಿಂಚನ, ಕುಸುಮಾಂಜಲಿ, ಮಹಮ್ಮದ್ ಫೈಜ್, ಫಾತಿಮಾ ಶಿಬ, ನರೇನ್, ಮನುಶ್ರೀ, ಆಯಿಷತ್ ಅಸ್ಮಿಯ, ಮೊಹಮ್ಮದ್ ಅಮಿಷ್ ,ಫಾತಿಮಾ ಸಿಮಾನ, ಇವರು ನೀಟ್ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದರೊಂದಿಗೆ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.ಇವರಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಕೆ ವಿ ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್, ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಹಾಗೂ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.