ಸುಳ್ಯ:ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಕುಮಾರ್ ಕಟೀಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯ ನಗರ ಪಂಚಾಯತ್ನ ತ್ಯಾಜ್ಯ ಸಂಸ್ಕರಣೆಗಾಗಿ ಕಲ್ಚರ್ಪೆ ಯಲ್ಲಿ ಅಳವಡಿಸಲಾಗಿರುವ ಗ್ಯಾಸಿಫಿಕೇಷನ್ ಯಂತ್ರವನ್ನು ಪರಿಶೀಲಿಸಿದರು. ನಗರ ಪಂಚಾಯತ್ನ ಈ ಯೋಜನೆಗೆ ಅವರು
ಶ್ಲಾಘನೆ ವ್ಯಕ್ತಪಡಿಸಿದರು. ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಗ್ಯಾಸಿಫಿಕೇಷನ್ ಯಂತ್ರದ ಬಗ್ಗೆ ಮಾಹಿತಿ ನೀಡಿದರು.
ಇದನ್ನು ಇನ್ನಷ್ಟು ಲಾಭದಾಯಕವಾನ್ನಾಗಿ ಮಾಡುವ ಕುರಿತು ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದರು.ಈ ಕುರಿತಂತೆ ಸ್ವಚ್ಛ ಭಾರತ್ ಮಿಷನ್ ಅಥವಾ ಕಂಪೆನಿಗಳ ಸಿಎಸ್ಆರ್ ನಿಧಿಯಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಪಂಚಾಯತ್ ಸದಸ್ಯರುಗಳಾದ ಕಿಶೋರಿ ಶೇಟ್, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಸರೋಜಿನಿ ಪೆಲತಡ್ಕ, ಬುದ್ದ ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್. ಮನ್ಮಥ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸಂತೋಷ್ ಜಾಕೆ,ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ಶ್ರೀನಾಥ್ ರೈ ಬಾಳಿಲ, ಬಾಲಕೃಷ್ಣ ಕೀಲಾಡಿ, ಶಾಂತರಾಮ ಕಣಿಲೆಗುಂಡಿ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಇತ್ತೀಚಿನ ನಿಧನರಾದ ಬಿಜೆಪಿ ಧುರೀಣ ನವೀನ್ ಕುಮಾರ್ ರೈ ಮೇನಾಲ ಅವರ ಮನೆಗೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದರು.