ಬೆಂಗಳೂರು:ರಾಜ್ಯಾದ್ಯಂತ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಉಚಿತವಾಗಿ ಇರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಯೋಜನೆ ಖಂಡಿತ ಅನುಷ್ಠಾನಕ್ಕೆ ಬರುತ್ತದೆ. ಯಾವಾಗಿನಿಂದ ಜಾರಿ ಎಂಬುದನ್ನು ಶೀಘ್ರವೇ ತಿಳಿಸುತ್ತೇವೆ. ಈ ಬಗ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮೇ 31ರ ಮಧ್ಯಾಹ್ನ 12ಕ್ಕೆ ಸಭೆ ಇದೆ. ಖರ್ಚು-ವೆಚ್ಚದ ಬಗ್ಗೆ ವಿವರ ಕೇಳಿದ್ದೇವೆ. ಎಲ್ಲ ವಿವರಗಳನ್ನೊಳಗೊಂಡ ವರದಿ ಸಿದ್ಧಪಡಿಸಿದ್ದು ಅದನ್ನು ನಾಳೆ ಮುಖ್ಯಮಂತ್ರಿ ಅವರಿಗೆ ಸಲ್ಲಿಸುತ್ತೇವೆ. ಸಭೆ ಬಳಿಕ ಕ್ಯಾಬಿನೆಟ್ ಸಭೆ ಇದೆ. ಅದಾದ ಮೇಲೆ ಮುಖ್ಯಮಂತ್ರಿಯವರೇ ಈ ಯೋಜನೆ ಯಾವಾಗಿಂದ ಜಾರಿ ಎಂಬುದನ್ನು ಘೋಷಣೆ ಮಾಡುತ್ತಾರೆ. ಈಗಾಗಲೇ ಸಾರಿಗೆ ಇಲಾಖೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದ್ದೇವೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇವೆ. ನೇಮಕಾತಿಗಳು, ಬಸ್ಗಳ ಖರೀದಿ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನುಳಿದ ಮಾಹಿತಿಗಳು ಮೇ 31ರ ಸಭೆಯ ಬಳಿಕ ಪ್ರಕಟಗೊಳ್ಳಲಿವೆ ಎಂದರು.
ವಿಧಾನಸಭೆ ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಗಳಲ್ಲಿ, ‘ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬುದೂ ಒಂದಾಗಿತ್ತು.