ಸುಳ್ಯ:ಸುಳ್ಯದ ಕುರುಂಜಿಭಾಗ್ ಐಪಿಎಸ್ ಶಾಲೆಯ ತಿರುವಿನಿಂದ ಉಜಿರುಗಳಿ ರಸ್ತೆಯ ಕಾಂಕ್ರೀಟೀಕರಣದ ಉದ್ಘಾಟನೆ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀಡಿದ್ದ 6 ಲಕ್ಷ ರೂ ವೆಚ್ಚದಲ್ಲಿ
110 ಮೀಟರ್ ಕಾಂಕ್ರಿಟೀಕರಣಗೊಂಡಿದೆ. ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರಿಬ್ಬನ್ ಕತ್ತರಿಸಿ ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಕಮಿಟಿ ಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಊರುಬೈಲು,
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನಗರ ಪಂಚಾಯತ್ ಸದಸ್ಯರಾದ ಶೀಲಾ ಅರುಣ ಕುರುಂಜಿ, ಸುಧಾಕರ ಕುರುಂಜಿಗುಡ್ಡೆ, ಪ್ರಮುಖರಾದ ಡಾ.ಯಶೋಧಾ ರಾಮಚಂದ್ರ, ಸುನಿಲ್ ಕೇರ್ಪಳ, ಬೂಡು ರಾಧಾಕೃಷ್ಣ ರೈ, ಶ್ರೀನಾಥ್ ಬಾಳಿಲ, ಮಹೇಶ್ ಕುಮಾರ್ ಮೇನಾಲ, ಗಿರೀಶ್ ಕಲ್ಲುಗದ್ದೆ, ದೊಡ್ಡಣ್ಣ ಬರೆಮೇಲು, ಜಿನ್ನಪ್ಪ ಪೂಜಾರಿ, ಶ್ಯಾಂ ಪಾನತ್ತಿಲ, ಜ್ಞಾನೇಶ್ ಶೇಟ್, ಜಗದೀಶ್ ಸರಳಿಕುಂಜ, ನಿಕೇಶ್ ಉಬರಡ್ಕ, ಸತೀಶ್ ಕಾಟೂರು, ಲೋಕೇಶ್ ಕೆರೆಮೂಲೆ, ಲಕ್ಷ್ಮಣ ಕೇರ್ಪಳ, ಸ್ಥಳಿಯ ಬೂತ್ ಅಧ್ಯಕ್ಷ ರಂಜಿತ್ ನೆಡ್ಚಿಲ್, ಹರ್ಷಿತಾ ರಂಜಿತ್, ಪ್ರತಿಭಾ ಜ್ಯೋತಿ, ಡಾ.ಗಿರಿಧರ ಗೌಡ, ಹೇಮಂತ ಕಾಮತ್, ಗುತ್ತಿಗೆದಾರ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು. ನ.ಪಂ. ಸದಸ್ಯೆ ಶೀಲಾ ಅರುಣ ಕುರುಂಜಿ ಸ್ವಾಗತಿಸಿ, ಸುನಿಲ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.