ಮಂಗಳೂರು:2010ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ಘಟನೆಯ ಸ್ಮರಣಾರ್ಥ ಗುರುವಾರ ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.ನಗರದ
ಕೂಳೂರು – ತಣ್ಣೀರುಬಾವಿ ರಸ್ತೆಯಲ್ಲಿ ವಿಮಾನ ದುರಂತದಲ್ಲಿ ಅಗಲಿದವರ ಸ್ಮರಣೆಗಾಗಿ ನಿರ್ಮಿಸಿರುವ ಪಾರ್ಕ್ನಲ್ಲಿ ಸ್ಮಾರಕಕ್ಕೆ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ಗೌರವ ಸಲ್ಲಿಸಿದರು.ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಿಲಿಕುಳ ಪ್ರಾಧಿಕಾರದ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸಾರ್ವಜನಿಕರು ಕೂಡ ಆಗಮಿಸಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.2010 ಮೇ.22ರಂದು ನಡೆದ ಮಂಗಳೂರು ವಿಮಾನ ದುರಂತದಲ್ಲಿ158 ಮಂದಿ ಮೃತಪಟ್ಟಿದ್ದರು. ದುಬೈನಿಂದ ಆಗಮಿಸಿದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿತ್ತು. ಇದೀಗ ದುರಂತಕ್ಕೆ 15 ವರ್ಷ ಸಂದಿದೆ.