ಸಂಪಾಜೆ: ಸಂಪಾಜೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಅಲ್ಲಲ್ಲಿ ಆವಾಂತರ ಸೃಷ್ಠಿಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಮದ ವಿವಿಧ ಕಡೆಗಳಲ್ಲಿ

ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದಂಡಕಜೆ, ಚಟ್ಟೆಕಲ್ಲು ಮತ್ತಿತರ ಕಡೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಚಟ್ಟೆಕಲ್ಲಿನಲ್ಲಿ ಮರ ಮುರಿದು ಬಿದ್ದು ರಬ್ಬರ್ ಶೀಟ್ ಶೇಖರಣಾ ಶೆಡ್ಗೆ ಹಾನಿಯಾಗಿದೆ. ದಂಡಕಜೆ, ಚಟ್ಟೆಕಲ್ಲು ರಸ್ತೆ ಕೆಸರುಮಯವಾಗಿದೆ. ಅಲ್ಲಲ್ಲಿ ಮರ ಬಿದ್ದು ತಡೆ ಉಂಟಾಗಿತ್ತು. ಒಟ್ಟಿನಲ್ಲಿ ಮೊದಲ ಮಳೆಗೆ ಸಂಪಾಜೆ ಭಾಗದ ವಿವಿಧ ಕಡೆಗಳಲ್ಲಿ ಆವಾಂತರ ಸೃಷ್ಟಿಯಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ.ಹಮೀದ್ ತಿಳಿಸಿದ್ದಾರೆ.