ಮುಂಬೈ:ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 24 ರನ್ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ ಒಂದು ಎಸೆತ ಉಳಿದಿರುವಂತೆ 169 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಮುಂಬೈ ಏಳು ಎಸೆತಗಳಿರುವಂತೆ 145 ರನ್ಗಳಿಗೆ ಆಲ್ ಔಟ್ ಆಯಿತು. ಮುಂಬೈಗೆ ಕೊನೆಯ
ಐದು ಓವರುಗಳಲ್ಲಿ 51 ರನ್ಗಳು ಬೇಕಿದ್ದವು. ಸೂರ್ಯಕುಮಾರ್ ಯಾದವ್ 56 ರನ್ (35 ಎಸೆತ, 4×6, 6×2) ಗಳಿಸಿ ಕ್ರೀಸ್ನಲ್ಲಿದ್ದರು. ಆದರೆ ರಸೆಲ್ ಇನಿಂಗ್ಸ್ನ 16ನೇ ಓವರ್ನಲ್ಲಿ ಸೂರ್ಯಕುಮಾರ್ ವಿಕೆಟ್ ಪಡೆದು ಹೊಡೆತ ನೀಡಿದರು.
ಐಪಿಎಲ್ನ ಅತಿ ದುಬಾರಿ ಆಟಗಾರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (33ಕ್ಕೆ4) ಕೊನೆಗೂ ನಿರ್ಣಾಯಕ ಸಂದರ್ಭದಲ್ಲಿ ಲಯಕ್ಕೆ ಮರಳಿ ನಾಲ್ಕು ವಿಕೆಟ್ ಪಡೆದರು.
19ನೇ ಓವರ್ನಲ್ಲಿ ಟಿಮ್ ಡೇವಿಡ್ (24) ಅವರನ್ನೂ ಸೇರಿದಂತೆ ಮೂರು ವಿಕೆಟ್ ಪಡೆದರು. ಮೊದಲು ಜಸ್ಪ್ರೀತ್ ಬೂಮ್ರಾ (18ಕ್ಕೆ3) ಮತ್ತು ನುವಾನ್ ತುಷಾರ (42ಕ್ಕೆ3) ಅವರ ದಾಳಿಯ ಮುಂದೆ ಕೋಲ್ಕತ್ತ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ವೆಂಕಟೇಶ್ ಅಯ್ಯರ್ (70; 52ಎ, 4X6, 6X3) ಮತ್ತು ಮನೀಷ್ ಪಾಂಡೆ (42; 31ಎ, 4X2, 6X2) ಬಲ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.