ಶ್ರೀಹರಿ ಕೋಟಾ: ಇಸ್ರೋದ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಪ್ರಯೋಗ ಯಶಸ್ವಿಯಾಗಿದೆ. ಮಾನವಸಹಿತ ಗಗನಯಾನ ಮಿಷನ್ನ ಮೊದಲ ಮಾನವ ರಹಿತ ಪರೀಕ್ಷಾ ಪ್ರಯೋಗ ಇಂದು ನಡೆಯಿತು. ಅ.21ರ ಶನಿವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.ಈ ಮೂಲಕ ಇಸ್ರೋ ಮತ್ತೊಂದು
ಮೈಲಿಗಲ್ಲು ಸಾಧಿಸಿದೆ. ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತು ರಾಕೆಟ್ ಸಾಗಿದ್ದು ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಗಿತ್ತು. ನಂತರ ಉಡ್ಡಯನಗೊಂಡ ರಾಕೇಟ್ ಪೂರ್ವ ನಿರ್ಧಾರದಂತೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು. ತಕ್ಷಣವೇ ಅದರೊಳಗಿದ್ದ ಗಗನಯಾನಿಗಳ ಮಾದರಿ ಹೊತ್ತ ಭಾಗವು ಸುರಕ್ಷಿತವಾಗಿ ನೌಕೆಯಿಂದ ಹೊರಬಂದಿತು. ಗಗನಯಾನ ಮಿಷನ್ನ ಭಾಗವಾದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ ಪರೀಕ್ಷಾರ್ಥ ಪ್ರಯೋಗವಾದ ಇದರಲ್ಲಿದ್ದ ಪ್ಯಾರಾಚೂಟ್ಗಳ ಮೂಲಕ ಬಂಗಾಳಕೊಲ್ಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ಮಿಷನ್ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸುವ ಭಾರತದ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗಿದೆ.ಈ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಮಾನವ ಸಹಿತ ಬಾಹ್ಯಾಕಾಶ ಯಾನದ
ಪ್ರಯೋಗವನ್ನು ಭಾರತ ನಡೆಸುತ್ತಿದೆ. ರಾಕೆಟ್ನಿಂದ ಬೇರ್ಪಟ್ಟು ಕ್ರ್ಯೂ ಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿವೆ. ವಿಜ್ಞಾನಿಗಳ ತಂಡದ ಶ್ರಮದಿಂದ ನೌಕೆ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ ವಿಜ್ಞಾನಿಗಳಿಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಅಭಿನಂದನೆ ಸಲ್ಲಿಸಿದರು. ರಾಕೆಟ್ನಿಂದ ಬೇರ್ಪಟ್ಟು ಕ್ರ್ಯೂ ಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಯಶಸ್ವಿಯಾಗಿ ಬಂಗಾಳಕೊಲ್ಲಿಯಲ್ಲಿ ಇಳಿದಿವೆ., ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗಿದೆ. ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಇಂದು ಬೆಳಗ್ಗೆ 8 ಗಂಟೆಗೆ ಶೆಡ್ಯೂಲ್ ಆಗಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಲ ಕಾಲ ಮುಂದೂಡಿಕೆಯಾಗಿದ್ದು ಕೊನೆಗೆ ಬೆಳಗ್ಗೆ 10 ಗಂಟೆಗೆ ಉಡಾವಣೆ ಯಶಸ್ವಿಯಾಗಿದೆ. ಈ ಪ್ರಯೋಗದಿಂದ ನೌಕೆಯ ಸುರಕತೆ ಹಾಗೂ ತುರ್ತು ಸಂದರ್ಭಗಳಲ್ಲಿ ಗಗನ ಯಾತ್ರಿಕರು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವ ಕುರಿತು ಇಸ್ರೋ ಅಧ್ಯಯನ ನಡೆಸಲು ಸಹಾಯಕವಾಗಿದೆ. ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಉಡಾವಣೆ ಮಾಡಿ, ಅಲ್ಲಿಂದ ಸಮುದ್ರಕ್ಕೆ ಬೀಳಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ಮುಂದುವರೆಸಿದೆ.