ಸುಳ್ಯ:ಗ್ರಾಂಡ್ ಮಾಸ್ಟರ್ ಶ್ರೀ ಹನುಮಂತ ರಾವ್ ಸ್ಮರಣಾರ್ಥವಾಗಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ಪುತ್ತೂರು ಇವರು ಆಯೋಜಿಸಿದ 42ನೇ ಬಿ ಕೆ ಐ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ – 2024ರ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.27-30 ಕೆ ಜಿ ಕುಮಿಟೆ ವಿಭಾಗದಲ್ಲಿ ನಾಲ್ಕನೇ ತರಗತಿಯ ಯು ಅದಿತಿ ದ್ವಿತೀಯ ಸ್ಥಾನ, 9 -10 ವರ್ಷದ ಹುಡುಗಿಯರ ಕಟಾ ವಿಭಾಗದಲ್ಲಿ
ಪ್ರಥಮ ಸ್ಥಾನ,12-13 ವರ್ಷದ ಹುಡುಗರ ಕಟಾ ವಿಭಾಗದಲ್ಲಿ ಆರನೇ ತರಗತಿಯ ವಂಶಿಕ್ ಬಿ ಎಚ್ ದ್ವಿತೀಯ ಸ್ಥಾನ, 40-45ಕೆ ಜಿ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, 11-12 ವರ್ಷದ ಹುಡುಗರ ಕುಮಿಟೆ ವಿಭಾಗದಲ್ಲಿ ವಿಜೇತ್ ಕೆ ಸಿ ತೃತೀಯ ಸ್ಥಾನ, 9-10 ವರ್ಷದ ಒಳಗಿನ ಹುಡುಗರ ಕಟಾ ವಿಭಾಗದಲ್ಲಿ ಮೋನಿಷ್ ಜಿ ಕೆ ಪ್ರಥಮ ಸ್ಥಾನ,9-12 ವರ್ಷದ ಒಳಗಿನ ಹುಡುಗರ ಕಟಾ ವಿಭಾಗದಲ್ಲಿ ತನುಷ್ ತೃತೀಯ ಸ್ಥಾನ, 11-12 ವರ್ಷದ ಹುಡುಗರ ಕಟಾ ವಿಭಾಗದಲ್ಲಿ ಬಿ ಎಚ್ ಹಿಲನ್ ತೃತೀಯ ಸ್ಥಾನ, 9-10 ವರ್ಷದ ಹುಡುಗಿಯರ ಕಟಾವಿಬಾಗದಲ್ಲಿ ನಾಲ್ಕನೇ ತರಗತಿಯ ಅಸ್ನ ತೃತೀಯ ಸ್ಥಾನ, 30-40 ಕೆ ಜಿ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಮೂರನೇ ತರಗತಿಯ ತೃಶಿಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.ಅದೇ ರೀತಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆರನೇ ತರಗತಿಯ ಹೇಮಂತ್
ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಡಾ ರೇಣುಕಾ ಪ್ರಸಾದ್ ಕೆ ವಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದಿಸಿದರು.