ಸುಳ್ಯ:ಕುಕ್ಕನ್ನೂರಿನ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವ ಏ.25ರಿಂದ ಮೇ.5ರ ತನಕ ನಡೆಯಲಿದೆ. ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ಮೊಕ್ತೇಸರಾಗಿರುವ ಬಾಲಕೃಷ್ಣ ಗೌಡ ನಡುಬೆಟ್ಟು ಅವರು ಬಿಡುಗಡೆ ಮಾಡಿದರು. ಹದಿನಾರು ಒಕ್ಕಲು ಕುಕ್ಕನ್ನೂರು ಹಾಗೂ ಹತ್ತು ಒಕ್ಕಲು ಸೋಣಂಗೇರಿಯ
ಜನರ ಸಮ್ಮುಖದಲ್ಲಿ ಕುಕ್ಕನ್ನೂರಿನ ನಾಯರ್ ಕಟ್ಟೆಯ ಬಳಿಯಲ್ಲಿ ಆಮಂತ್ರಣ ಬಿಡುಗಡೆ ಮಾಡಿ ಮನೆ ಮನೆಗೆ ವಿತರಿಸಲಾಯಿತು.
ಜಾತ್ರೋತ್ಸವದ ಕಾರ್ಯಕ್ರಮಗಳು:
ಏ.25ರಂದು ಗೊನೆ ಕಡಿಯುವುದು. ಮೇ1ರಂದು ಪೂ.10
ಮುಂಡೈಗೆ ಶೃಂಗಾರ ರಾತ್ರಿ ಗಂಟೆ 8ಕ್ಕೆ ದೇವರ ಪೂಜೆ ಮೇ.2 ರಂದು ಪೂ.7ಕ್ಕೆ ಗಣಪತಿ ಹೋಮ ಪೂ.10ಕ್ಕೆ ಧ್ವಜರೋಹಣ
ರಾತ್ರಿ ಗಂಟೆ 8ಕ್ಕೆ : ಸಂಕ್ರಮಣ, ವಾಲಸಿರಿ, ಕೊಡಿಬಂಡಿ ಉತ್ಸವ ಮೇ.3ರಂದುಪೂ.9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ರಾತ್ರಿ ಗಂಟೆ 3ರಿಂದ ನಡುಬಂಡಿ ಉತ್ಸವ, ರಾತ್ರಿ ಸಿಡಿಮದ್ದು. ಮೇ.4ರಂದು ಬೆಳಿಗ್ಗೆ 7ಕ್ಕ ಕಿರಿಯರ ನೇಮ ಬೆಳಿಗ್ಗೆ 9ಕ್ಕೆ ನಾಯರ್ ನೇಮ, ಹರಕೆ ಕಾಣಿಕೆ ಸ್ವೀಕಾರ ಮಧಾಹ್ನ12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ
ರಾತ್ರಿ8ಕ್ಕೆ ಸಂಕ್ರಮಣ ಪೂಜೆ ಸಮಾರಾಧನೆ. ಮೇ.5 ಬೆಳಿಗ್ಗೆ 7ಕ್ಕೆ ವಾಲಸಿರಿ ಕಡೆಬಂಡಿ ಉತ್ಸವ ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜರೋಹಣ ನಡೆಯಲಿದೆ.