ಅಜ್ಜಾವರ:ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಜೀಪು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಪರಿಣಾಮ ಬೈಕ್ ನಲ್ಲಿದ್ದ ದಂಪತಿಗಳಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ.ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿರುವ ವಿನಾಯಕ ಮೂರ್ತಿ ಹಾಗೂ ಮಂಜುಳಾ ದಂಪತಿ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿರುವಾಗ ಅಜ್ಜಾವರ ದಲ್ಲಿ ಈ ಘಟನೆ ನಡೆದಿದೆ.ವಿನಾಯಕ ಮೂರ್ತಿಯವರಿಗೆ ಗಂಭೀರ ಗಾಯವಾಗಿದ್ದು, ದಂಪತಿಗಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.