ಮಡಿಕೇರಿ: ಕಾಡಾನೆಯೊಂದು ಜನ ವಸತಿ ಪ್ರದೇಶದಲ್ಲಿ ಮನೆಯ ಸಮೀಪದಲ್ಲೇ ಮರಿಗೆ ಜನ್ಮ ನೀಡಿರುವ ಘಟನೆ ಕೊಡಗು ಜಿಲ್ಲೆಯ ಕರಡ ಗ್ರಾಮದಲ್ಲಿ ನಡೆದಿದೆ. ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆಕಾಡುವಿನಲ್ಲಿ ಮನೆಯೊಂದರ ಬಳಿ ಕಾಡಾನೆಯೊಂದು ಸೋಮವಾರ ರಾತ್ರಿ ಹೆಣ್ಣುಮರಿಗೆ ಜನ್ಮ ನೀಡಿದ್ದು, ಮರಿಯು ಮನೆಯ ಕೊಟ್ಟಿಗೆಯಲ್ಲಿದ್ದರೆ, ತಾಯಿ ಆನೆ ಸಮೀಪದ ತೋಟದಲ್ಲಿ ಮರಿಯಾನೆಯ ಆಗಮನಕ್ಕಾಗಿ ಕಾಯುತ್ತಾ ನಿಂತಿದೆ.ಮನೆಯಂಗಳದಲ್ಲಿ ಕಾಡಾನೆ ಮರಿ ಹಾಕಿರುವ ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ತಂಡೋಪತಂಡವಾಗಿ ಜನರು ಆಗಮಿಸಿ ಮರಿಯಾನೆಯನ್ನು ವೀಕ್ಷಿಸುತ್ತಿದ್ದಾರೆ. ವಿಷಯ ತಿಳಿದ ವೀರಾಜಪೇಟೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.











