ಜರುಸಲೇಂ:ಹಮಾಸ್ ವಶದಲ್ಲಿದ್ದ ಗಾಜಾ ಗಡಿಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿರುವ ಇಸ್ರೇಲ್ ಗಡಿಯಲ್ಲಿ ಬಿಗು ನಿಯಂತ್ರಣ ಸಾಧಿಸಿದೆ. ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಸೇನೆ ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಅಕ್ಟೋಬರ್ 7 ರಂದು
ಹಮಾಸ್ ದಾಳಿಯ ನಂತರ, ಇಸ್ರೇಲಿ ಸೇನೆಯು ನಿರಂತರವಾಗಿ ಗಾಜಾ ಗಡಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಗಾಜಾ ಗಡಿ ಪ್ರದೇಶಗಳನ್ನು ಹಮಾಸ್ನಿಂದ ಹಿಂಪಡೆದಿದೆ ಎಂದು ವರದಿಯಾಗಿದೆ.ನಿನ್ನೆ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಲ್ಲಿ ನಿರಂತರ ಬಾಂಬ್ ದಾಳಿ ನಡೆಸಿತು. ಗಡಿಯನ್ನು ಪ್ರವೇಶಿಸಿದ 1500 ಹಮಾಸ್ ಉಗ್ರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಗಾಜಾದ ಮೇಲೆ ಇಸ್ರೇಲ್ ದಾಳಿ ಶುರು ಮಾಡಿದ ನಂತರ ಯಾರೂ ಗಡಿಯನ್ನು ದಾಟಿಲ್ಲ. ಯಾವುದೇ ಒಳನುಸುಳುವಿಕೆ ಇಲ್ಲ ಎಂದು ಹೇಳಿದೆ.ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಬೆದರಿಕೆ ಹಾಕಿತ್ತು.