ಅಹಮದಾಬಾದ್: ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 55 ರನ್ ಅಂತರದಿಂದ ಸೋಲಿಸಿದೆ.
ಗೆಲ್ಲಲು 208 ರನ್ ಗುರಿ ಪಡೆದಿದ್ದ ಮುಂಬೈ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಮುಂಬೈ ಪರ ನೆಹಾಲ್(40 ರನ್, 21 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ಕ್ಯಾಮರೂನ್ ಗ್ರೀನ್(33 ರನ್, 26 ಎಸೆತ), ಸೂರ್ಯಕುಮಾರ್ ಯಾದವ್(23 ರನ್, 12 ಎಸೆತ), ಪಿಯೂಷ್ ಚಾವ್ಲಾ(18 ರನ್, 12 ಎಸೆತ) ಹಾಗೂ
ಅರ್ಜುನ್ ತೆಂಡುಲ್ಕರ್(13 ರನ್, 9 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. ಗುಜರಾತ್ ಬೌಲಿಂಗ್ ವಿಭಾಗದಲ್ಲಿ ನೂರ್ ಅಹ್ಮದ್(3-37)ಯಶಸ್ವಿ ಬೌಲರ್ ಎನಿಸಿಕೊಂಡರು. ರಶೀದ್ ಖಾನ್(2-27) ಹಾಗೂ ಮೋಹಿತ್ ಶರ್ಮಾ (2-38) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ತಂಡ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಶುಭಮನ್ ಗಿಲ್(56 ರನ್, 34 ಎಸೆತ) ಅರ್ಧಶತಕದ ಕಾಣಿಕೆಯ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ.ಗುಜರಾತ್ ಪರ ಡೇವಿಡ್ ಮಿಲ್ಲರ್(46 ರನ್, 22 ಎಸೆತ) ಹಾಗೂ ಅಭಿನವ್ ಮನೋಹರ್(42 ರನ್, 21 ಎಸೆತ)ಉಪಯುಕ್ತ ಕೊಡುಗೆ ನೀಡಿದರು. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕೊನೆಯ 4 ಓವರ್ಗಳಲ್ಲಿ 70 ರನ್ ಸೇರಿಸಿ 200ಕ್ಕೂ ಅಧಿಕ ಕಲೆ ಹಾಕಿತು. ರಾಹುಲ್ ಟೆವಾಟಿಯಾ ಔಟಾಗದೆ 20 ರನ್(5 ಎಸೆತ, 3 ಸಿಕ್ಸರ್)ಗಳಿಸಿ ಅಬ್ಬರಿಸಿದರು. ವಿಜಯ ಶಂಕರ್ 19 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 13 ರನ್ ಗಳಿಸಿದರು.