ಹೊಸದಿಲ್ಲಿ: ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಭಾರತ ಭಾರೀ ತಿರುಗೇಟು ನೀಡಿದೆ. ಪಾಕ್ ನಗರಗಳ ಮೇಲೆ ಭಾರತ ಪ್ರತಿ ದಾಳಿ ನಡೆಸಿದೆ. ಭಾರತದ ಪ್ರತಿ ದಾಳಿಗೆ ಪಾಕಿಸ್ತಾನ ಅಕ್ಷರಷಃ ನಲುಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.ಪಾಕಿಸ್ತಾನದ
ಲಾಹೋರ್, ಇಸ್ಲಾಮಾಬಾದ್, ಸಿಯಾಲ್ಕೋಟ್ ಸೇರಿದಂತೆ ಪಾಕಿಸ್ತಾನದ ನಗರಗಳ ಮೇಲೆ ಭಾರತ ಡ್ರೋಣ್, ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ . ಮೂರು ಸೈನಿಕ ವಿಭಾಗವು ಜಂಟಿಯಾಗಿ ನಡೆಸಿದ ದಾಳಿಯ ಪರಿಣಾಮ ಪಾಕಿಸ್ತಾನದಲ್ಲಿ ಭಾರೀ ನಷ್ಟ ಉಂಟಾಗಿರುವ ಸಾಧ್ಯತೆ ಇದೆ.

ಜಮ್ಮು, ಪಂಜಾಬ್ ಮತ್ತು ರಾಜಸ್ಥಾನ ಪ್ರದೇಶಗಳಲ್ಲಿ ಪಾಕಿಸ್ಥಾನದ ಕಡೆಯಿಂದ ನಿರಂತರ ದಾಳಿ ನಡೆಯಿತು. ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆಯು 50ಕ್ಕೂ ಹೆಚ್ಚು ಡ್ರೋಣ್ ಹಾಗೂ ಕ್ಷಿಪಣಿಗಳನ್ನು ನಾಶಪಡಿಸಿದೆ. ಲಾಹೋರ್, ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಲು ಮುಂದಾಗಿದೆ.












