ಫ್ಲೋರಿಡ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.ಯಶಸ್ವಿ ಜೈಸ್ವಾಲ್ ಮತ್ತು ಶುಭಮಲ್ ಗಿಲ್ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಜಯ ಸಾಧಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ2–2 ರಲ್ಲಿ ಸಮಬಲ
ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡ 8 ವಿಕೆಟ್ಗಳಿಗೆ 178 ರನ್ ಗಳಿಸಿದರೆ, ಭಾರತ ಓವರ್ಗಳು ಇರುವಂತೆಯೇ 1 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಭಾರತ ತಂಡಕ್ಕೆ ಜೈಸ್ವಾಲ್ (ಔಟಾಗದೆ 84, 51 ಎ., 4X11, 6X3) ಮತ್ತು ಗಿಲ್ (77 ರನ್, 47 ಎ., 4X3, 6X5) ಮೊದಲ ವಿಕೆಟ್ಗೆ 15.3 ಓವರ್ಗಳಲ್ಲಿ 165 ರನ್ ಸೇರಿಸಿ ಗೆಲುವಿನ ನಗೆ ಬೀರಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೆಟ್ಮೆಯರ್ (61; 39ಎ, 4X3, 6X4) ಮತ್ತು ಶೈ ಹೋಪ್ (45; 29ಎ, 4X3, 6X2) ಅವರ ಆಟದಿಂದ ಸವಾಲಿನ ಮೊತ್ತ ಪೇರಿಸಿತು.