ಸುಳ್ಯ:ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಸುಳ್ಯ ಘಟಕದ ವತಿಯಿಂದ ಆಟಿಡೊಂಜಿ ದಿನ , ಸಾಧಕರಿಗೆ ಸನ್ಮಾನ, ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆ.13 ರಂದು ಸುಳ್ಯ ಕೆ.ವಿ.ಜಿ. ಪುರಭವನದಲ್ಲಿ ನಡೆಯಿತು.
ಬೆಳಿಗ್ಗೆ ಸತ್ಯಸಾರವಾಣಿ ದೈವಗಳಿಗೆ ದೀಪ ಬೆಳಗಿಸುವುದರ ಮೂಲಕ ಆದಿದ್ರಾವಿಡ ಸಮಾಜ ಸಂಘಟನೆಯ ಹಿರಿಯರಾದ ಮಾಯಿಲಪ್ಪ ಬೂಡು ಸ್ಪರ್ಧಾ ಕಾರ್ಯಕ್ರಮಗಳಿಗೆ
ಚಾಲನೆ ನೀಡಿದರು. ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.
ಸಭಾ ಕಾರ್ಯಕ್ರಮ:
ಬಳಿಕ ನಡೆದ ಸಭಾ ಕಾರ್ಯಕ್ರಮನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಉದ್ಘಾಟಿಸಿದರು.
“ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಮತ್ತು ಅಧಿಕಾರ ಸಿಕ್ಕಿದೆ. ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ದೊರಕುವಂತಾಗಿದೆ ಎಂದು ಹೇಳಿದರು. ಪ್ರತಿ ಜನಾಂಗದಲ್ಲಿರುವ
ಭಾಷೆ, ಸಂಸ್ಕೃತಿ ಕಲಾ ಪ್ರತಿಭೆ, ಕ್ರೀಡಾ ಪ್ರತಿಭೆ ಅನನ್ಯವಾದುದು. ಸಮಾಜದ ಮೂಲ ಸಂಸ್ಕೃತಿಯನ್ನು ಹೊಂದಿರುವ ಜನಾಂಗದ ಕಲೆ, ಸಂಸ್ಕೃತಿ, ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಅವರು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ
ಅಂಬೇಡ್ಕರ್ ಅವರು ನೀಡಿದ ಸಂವಿಧನಾದಿಂದ ದುರ್ಬಲ ವರ್ಗದವರು ಕೂಡ ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಿದೆ. ಹಲವರು ಅಧಿಕಾರ ಪಡೆಯುವಂತಾಗಿದೆ ಎಂದರು.ಪ್ರತಿ ಸಮುದಾಯದ ಸಂಘಟನೆಗಳ ಮಧ್ಯೆ ಸಾಮರಷ್ಯ ಬೆಳೆಯಬೇಕು ಎಂದು ಅವರು ಹೇಳಿದರು.
ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋನಪ್ಪ ರಾಜಾರಾಂಪುರ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಮುಖಂಡ ಆನಂದ ಬೆಳ್ಳಾರೆ ಮುಖ್ಯ ಭಾಷಣ ಮಾಡಿದರು.
ಕರ್ನಾಟಕ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಉಳ್ಳಾಳ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು.
ಜಾತ್ಯಾತೀತ ಜನಾದಳದ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಸೋಮನಾಥ್ ಉಪ್ಪಿನಂಗಡಿ, ಮಾಜಿ ಜಿಲ್ಲಾಧ್ಯಕ್ಷ ಮೋಹನ್ ನೆಲ್ಲಿಗುಂಡಿ, ಜಿಲ್ಲಾ ಗೌರವ ಸಲಹೆಗಾರ ವಿಜಯ ಆಲಡ್ಕ, ಸಂಘದ ಸುಳ್ಯ ಘಟಕದ ಗೌರವಾಧ್ಯಕ್ಷ ಕೆ.ಎಂ.ಬಾಬು ಜಾಲ್ಸೂರು, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ, ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮಚಂದ್ರ ಕೊಯಿಲ, ಸುಳ್ಯ ಘಟಕದ ಕಾರ್ಯದರ್ಶಿ ದಿಲೀಪ್ ಕೆ.ಎಲ್, ಕೋಶಾಧಿಕಾರಿ ಮಲ್ಲೇಶ್ ಕುಡೆಕಲ್ಲು, ನಗರ ಅಧ್ಯಕ್ಷ ಶ್ರವಣ್ ಕುಮಾರ್, ಪ್ರಮುಖರಾದ ಚೋಮ ನಾವೂರು, ಶೀನಪ್ಪ ಬಯಂಬು, ರಾಘವ ಅಜ್ಜಾವರ, ಮಾಯಿಲಪ್ಪ ಬೂಡು, ಬಾಲಕೃಷ್ಣ ದೊಡ್ಟೇರಿ, ಜಗನ್ನಾಥ ಮಠತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಗೌರವ ಸಲಹೆಗಾರರಾದ ವಿಜಯ ಆಲಡ್ಕ ಸ್ವಾಗತಿಸಿ, ತಾಲೂಕು ಘಟಕದ ಕಾರ್ಯದರ್ಶಿ ದಿಲೀಪ್ ಕೆ.ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾರಾಮ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 2022-23ನೇ ಸಾಲಿನನಲ್ಲಿ ಶೈಕ್ಷಣಿಕ ವರ್ಷದಲ್ಲಿ ಸುಳ್ಯ ತಾಲೂಕಿನ ಆದಿದ್ರಾವಿಡ ಸಮುದಾಯದ 10ನೇ ತರಗತಿ ಹಾಗೂ ಪಿಯುಸಿ (3 ವಿಭಾಗ)ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿರಿಗೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳ ಭೋಜನ ಕೂಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.