ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಂಗಳವಾರ ಸಂಜೆಯಿಂದ ರಾತ್ರಿ ತನಕ ಭಾರೀ ಮಳೆಯಾಗಿದೆ. ಕಲ್ಮಕಾರು ಭಾಗದಲ್ಲಿ ಭಾರೀ ಮಳೆಯಾಗಿದ್ದು ಹೊಳೆಯಲ್ಲಿ
ನೀರಿನ ಹರಿವು ಹೆಚ್ಚಾಗಿತ್ತು. ಸಂಪಾಜೆ ಭಾಗದಲ್ಲಿ ಸಂಜೆಯ ವೇಳೆಗೆ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದ ನದಿ, ಹೊಳೆ ಹಾಗೂ ತೋಡುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಬಾಳಿಲದಲ್ಲೂ ಗುಡುಗು ಸಿಡಿಲು ಸಹೀತ ಭರ್ಜರಿ ಮಳೆಯಾಗಿದೆ. ಎಣ್ಮೂರು ಗಾಳಿ,ಸಿಡಿಲು, ಗುಡುಗು ಸಹೀತ ಮಳೆಯಾಗಿದೆ ಬೆಳ್ಳಾರೆ, ಕಾವಿನಮೂಲೆ ಸೇರಿದಂತೆ ವಿವಿಧ ಕಡೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಧಾರಾಕಾರ ಮಳೆಯಾಗಿದೆ.ರಾತ್ರಿಯೂ ಮಳೆ ಮುಂದುವರಿದಿದೆ.