ಸುಳ್ಯ:ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿವಿಧ ಕಡೆಗಳಲ್ಲಿ ಭರ್ಜರಿ ಮಳೆಯಾಗಿದೆ. ಎ.9ರಂದು ಸಂಜೆಯ ವೇಳೆಗೆ ಮಳೆಯಾಗಿದ್ದು ಸುಳ್ಯ ತಾಲೂಕಿನ ವಿವಿಧ ಕಡೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ
ಮಳೆ ಸುರಿದಿದೆ. ಕೆಲವೆಡೆ ಸಾಮಾನ್ಯ ಮಳೆಯಾದರೆ ಕೆಲವೆಡೆ ಭರ್ಜರಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಎಲ್ಲೆಡೆ ಕತ್ತಲು ಕವಿದ ವಾತಾವರಣ ಇದ್ದು ಉತ್ತಮ ಮಳೆ ಸುರಿದಿದೆ. ಕಡಬ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಸುರಿದ ಬಗ್ಗೆ ಮಾಹಿತಿಯಿದೆ.
ಬಳ್ಪ, ಕಲ್ಮಡ್ಕ, ಎಣ್ಮೂರು, ಬಾಳಿಲ, ಕಂಜರ್ಪಣೆ, ಬೆಳ್ಳಾರೆ, ಕೇನ್ಯ, ಕೋಟೆ ಮುಂಡುಗಾರು, ಮುರುಳ್ಯ, ಉಬರಡ್ಕ, ಕಲ್ಲಾಜೆ, ಬೆಳ್ಳಿಪ್ಪಾಡಿ, ಜಾಲ್ಸೂರು, ತೊಡಿಕಾನ ಸೇರಿದಂತೆ ಸುಳ್ಯ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಎಲ್ಲೆಡೆ ಗುಡುಗು, ಸಿಡಿಲು ಹಾಗೂ ಭಾರೀ ಗಾಳಿಯ ಅಬ್ಬರವೂ ಜೋರಾಗಿತ್ತು. ನಿರಂತರ ಎರಡನೇ ದಿನ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ.