ಸುಳ್ಯ:ಸುಳ್ಯ ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಸಂಪನ್ನಗೊಂಡಿತು. ಕ್ಷೇತ್ರದಲ್ಲಿ
ಸಂಧ್ಯಾ ಕಾಲ ಗುತ್ಯಮ್ಮ ದೇವಿಗೆ ರಂಗಪೂಜಾ ಸೇವೆ ನೆರವೇರಿತು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ ವಿಶೇಷತೆ. ಜ.29ರಿಂದ ಆರಂಭಗೊಂಡು ಕ್ಷೇತ್ರದ ಉತ್ಸವ ಮೂರು ದಿನಗಳ ಕಾಲ
ನಡೆಯಿತು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಪ್ರತಿ ವರ್ಷ 3 ದಿನಗಳ ಕಾಲ ವಿಜ್ರಂಭಣೆಯ ವಾರ್ಷಿಕ ಉತ್ಸವ ನಡೆಯುತ್ತದೆ.ದೈವಜ್ಞರಾದ ಕಾರ್ಕಳ ಕೊಂಡೆಜಾಲು ಶ್ರೀ ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ಗರ್ಭಗುಡಿಯ ಬಾಗಿಲು ತೆರೆದು ವಿಶೇಷ ಪೂಜೆಗಳು ನಡೆಯಿತು. ಇಂದು ಬೆಳಗ್ಗೆ ಗಂಟೆ 8ರಿಂದ ಸ್ವಸ್ತಿ ಪುಣ್ಯಾಹವಾಚನೆ,
ನಿರ್ಮಾಲ್ಯ ವಿಸರ್ಜನೆ, ರುದ್ರ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಸಾವಿರಾರು ಮಂದಿ ಜಾತ್ರೋತ್ಸವದಲ್ಲಿ ಭಾಗವಹಿಸಿ ಗುತ್ಯಮ್ಮ ದೇವಿಯ ದರ್ಶನ ಪಡೆದರು.
ಕ್ಷೇತ್ರದ ಧರ್ಮದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್ ಪ್ರಸಾದ್, ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.