ದುಗ್ಗಲಡ್ಕ: ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗ್ಗಲಡ್ಕ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಯುವಕಮಂಡಲ ಕಟ್ಟಡದಲ್ಲಿ ನಡೆಯಿತು. ಧ್ವಜರೋಹಣವನ್ನು ನ್ಯಾಯವಾದಿ ಸುರೇಶ್ ನಾಯಕ್ ದುಗ್ಗಲಡ್ಕ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ ಪಾಲ್ಗೊಂಡರು.
ಕುರಲ್ ತುಳುಕೂಟದ
ಸಂಚಾಲಕ ಕೆ.ಟಿ.ವಿಶ್ವನಾಥ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುರಲ್ ತುಳುಕೂಟದ ಗೌರವಾಧ್ಯಕ್ಷ ನಾರಾಯಣ ಟೈಲರ್, ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ, ಅಧ್ಯಕ್ಷ ಚೇತನ್ ಕಲ್ಮಡ್ಕ, ಮಾಜಿ ಅಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ,
ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ, ಕುರಲ್ ತುಳುಕೂಟದ ಕಾರ್ಯದರ್ಶಿ ಮನೋಜ್ ಪಾನತ್ತಿಲ, ಕೋಶಾಧಿಕಾರಿ ಶೇಖರ್ ಕುದ್ರಾಜೆ, ಮಾಜಿ ನ.ಪಂ.ಸದಸ್ಯರರಾದ ಇಬ್ರಾಹಿಂ ನೀರಬಿದಿರೆ, ಜಯಶೀಲ ದುಗ್ಗಲಡ್ಕ, ಯುವಕ ಮಂಡಲದ ಪೂರ್ವಾಧ್ಯಕ್ಷರುಗಳಾದ ಕೆ.ಎನ್.ಜಯರಾಮ ಶೆಟ್ಟಿ, ಕೆ.ಟಿ.ಬಾಗೀಶ್, ಧನಂಜಯ ಕಲ್ಮಡ್ಕ, ಹಿರಿಯ ಪದಾಧಿಕಾರಿಗಳಾದ ಕೃಷ್ಣ ಸ್ವಾಮಿ ಕಂದಡ್ಕ, ವಾರಿಜ ಕೊರಗಪ್ಪ ಗೌಡ ಕೊಯಿಕುಳಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.