ಸಂಪಾಜೆ: ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿಕೆ ಲೆಜೆಂಡ್ಸ್ ಕಲ್ಲುಗುಂಡಿ ಹಾಗೂ ಮುಸ್ಲೀಂ ಯೂತ್ ಫೆಡರೇಷನ್ ವತಿಯಿಂದ ಗೂನಡ್ಕದ ಸಜ್ಜನ ಪ್ರತಿಷ್ಠಾನದ ಸಭಾ ಭವನದಲ್ಲಿ ನಡೆದ ಸುಳ್ಯ ತಾಲೂಕು ಮತ್ತು ರಾಜ್ಯ ಮಟ್ಟದ ದಫ್ ಸ್ಪರ್ಧೆ
ಸಂಪನ್ನಗೊಂಡಿತು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ನಾಲ್ಕು ತಂಡಗಳು ತಲಾ
28.50 ರಂತೆ ಸಮಾನ ಅಂಕಗಳನ್ನು ಪಡೆದ ಕಾರಣ ನಾಲ್ಕು ತಂಡಗಳಿಗೆ ಬಹುಮಾನವನ್ನು ಸಮಾನಾಗಿ ಹಂಚಲಾಯಿತು.ಬಳಿಕ ಡ್ರಾ ಮೂಲಕ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ಸ್ಥಾನದ ತಂಡವನ್ನು ಆಯ್ಕೆ ಮಾಡಿ ಟ್ರೋಫಿಯನ್ನು ವಿತರಿಸಲಾಯಿತು.ಅದರಂತೆ ಖುವ್ವತ್ತುಲ್ ಇಸ್ಲಾಂ ದಫ್ ಕಮಿಟಿ ಕಾಪು, ಅನ್ನಜಾತ್ ದಫ್ ತಂಡ ಉಳ್ಳಾಲ, ತಾಜುಲ್ ಹುದಾ ದಫ್ ಕಮಿಟಿ ದೇರಳಕಟ್ಟೆ, ಖಲಂದರ್ ಷಾ ದಪ್ ಕಮಿಟಿ ಮಾಣಿಪುರ ಕಟಪಾಡಿ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ವಿತರಿಸಲಾಯಿತು.

ತಾಲೂಕು ಮಟ್ಟದಲ್ಲಿ ತ್ವಬಾ ದಫ್ ತಂಡ ಗೂನಡ್ಕ, ದುಲ್ಪುಕಾರ್ ದಪ್ ತಂಡ ಸುಳ್ಯ, ಕಲ್ಲುಗುಂಡಿ ಎಂಜೆಎಂ ತಂಡ ತೃತೀಯ ಹಾಗೂ ಪೇರಡ್ಕ ಎಂಜೆಎಂ ತಂಡ ಚತುರ್ಥ ಸ್ಥಾನ ಪಡೆಯಿತು.
ದಫ್ ಸ್ಪರ್ಧೆಗೆ ಮುನ್ನ ಆಕರ್ಚಕ ಮೆರವಣಿಗೆ ನಡೆಯಿತು. ಸಂಪಾಜೆ ದಫ್ ಸ್ಪರ್ಧಾರ್ಥಿಗಳ ರ್ಯಾಲಿಗೆ ಜೆ.ಡಿ.ಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ದಫ್ ಬಾರಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದಫ್ ಇಸ್ಲಾಮಿನ ಒಳ್ಳೆಯ ಸಾಂಸ್ಕೃತಿಕ ಕಲೆ, ನಶಿಸಿ ಹೊಗುವ ಈ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಈ ಭಾಗದ ಜನನಾಯಕರುಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಈ ಹಿಂದೆ ನಾನು ಈ ಭಾಗದ ದರ್ಕಾಸ್ ಅಂಗನವಾಡಿ ಅಭಿವೃದ್ಧಿ ಕೆಲಸಕ್ಕೆ ನನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ ರೂಪಾಯಿ ಅನುಧಾನವನ್ನು ನೀಡಿರುತ್ತೇನೆ. ಮುಂದೆಯು ಅನುದಾನ ನೀಡಲು ಬದ್ದನಾಗಿರುತ್ತೇನೆ ಎಂದರು.

ಪೇರಡ್ಕ ಜುಮಾ ಮಸೀದಿಯ ಖತೀಬರಾದ ನಹೀಂ ಫೈಝಿ ದುವಾ ನೆರವೇರಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಉಧ್ಯಮಿ ಬಿ.ಎಂ ಫಾರೂಕ್ ರನ್ನು ಸನ್ಮಾನಿಸಿದರು. ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿದರು. ಬಳಿಕ ನಡೆದ ದಫ್ ಸ್ಪರ್ಧೆಯನ್ನು ಡಾ.ಉಮ್ಮರ್ ಬೀಜದಕಟ್ಟೆ ಉದ್ಘಾಟಿಸಿದರು. ಟಿ.ಎಂ.ಶಹೀದ್ ತೆಕ್ಕಿಲ್ ಹಾಗೂ ಉಮ್ಮರ್ ಬೀಜದಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಆಲಿಹಾಜಿ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಪೇರಡ್ಕ ಜಮಾಅತ್ ಉಪಾಧ್ಯಕ್ಷ ಟಿ ಬಿ ಹನೀಫ್ ಗೂನಡ್ಕ ,ಕಾರ್ಯದರ್ಶಿ ಪಿ.ಕೆ ಉಮ್ಮರ್ ಗೂನಡ್ಕ,ನಗರ ಪಂಚಾಯತ್ ಸದಸ್ಯರಾದ ಕೆ.ಎಸ್. ಉಮ್ಮರ್, ಸಿದ್ಧಿಕ್ ಕೊಕ್ಕೊ, ಶರೀಫ್ ಕಂಠಿ, ಮುಖಂಡರಾದ ಕೆ.ಎಂ.ಮುಸ್ತಫ, ಎಸ್.ಸಂಶುದ್ದೀನ್, ಇಕ್ಬಾಲ್ ಎಲಿಮಲೆ, ಅಬೂಬಕ್ಕರ್ ಅಡ್ಕಾರ್,ಖಲಂದರ್ ಎಲಿಮಲೆ, ತಾಜ್ ಮೊಹಮ್ಮದ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ ಹನೀಫ್, ಪಿ. ಎ.ಉಮ್ಮರ್ ಹಾಜಿ ಉಬೈಸ್, ರಝಾಕ್ ಕುಕ್ಕಾಜೆ, ಲತೀಫ್ ನೇರಳಕಟ್ಟೆ, ಏಸ್.ಪಿ.ಅಬೂಬಕ್ಕರ್ , ಲತೀಫ್ ಹರ್ಲಡ್ಕ, ಹಮೀದ್ ಕುತ್ತಮೊಟ್ಟೆ, ಹಮೀದ್ ಗೋಳ್ತಮಜಲು, ನೌಫಲ್ ವಿಟ್ಲ, ಉನೈಸ್ ಗೂನಾಡ್ಕ , ಹ್ಯಾರಿಸ್ ಝಾಮ್ ಝಾಮ್ ರಶೀದ್ ಜಟ್ಟಿಪಳ್ಳ ಉನೈಸ್ ಪೆರಾಜೆ, ಉಮ್ಮರ್ ತಾಜ್ ಕಲ್ಲುಗುಂಡಿ, ಇಬ್ರಾಹಿಂ ಮೈಲುಕಲ್ಲು, ಆರಿಫ್ ತೆಕ್ಕಿಲ್, ರಫೀಕ್ ಕರಾವಳಿ, ಕೆ.ಎ ರಜಾಕ್ ಕಲ್ಲುಗುಂಡಿ ಹನೀಫ್ ಮೊಟ್ಟೆಂಗಾರ್, ಅಬ್ದುಲ್ ಖಾದರ್ ಮೊಟ್ಟೆಂಗಾರ್, ನೌಶಾದ್ ಅಝ್ಹರಿ, ಅಬ್ದುಲ್ ಕಲಾಂ ಸುಳ್ಯ, ಅಶ್ರಫ್ ಟರ್ಲಿ, ಉಬೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.